ಉ.ಕ ಸುದ್ದಿಜಾಲ ಧಾರವಾಡ :

ಧಾರವಾಡದ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲು ಒತ್ತಾಯ. ಕಳೆದ ವರ್ಷ ಇದೆ ವಿಷಯಕ್ಕೆ ನಡೆದಿತ್ತು ಧರ್ಮ ವ್ಯಾಪಾರ ದಂಗಲ್ ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶಕ್ಕೆ ಹೆಚ್ಚಾಗಿದ್ದ ವಿರೋಧದ ಕೂಗು.

ಹನುಮಂತ ದೇವಸ್ಥಾನದಲ್ಲಿ ನಡೆದಿದ್ದ ಕಲ್ಲಂಗಡಿಯ ದೊಡ್ಡ ಗಲಾಟೆ ಕಳೆದ ವರ್ಷ ಜೋರಾಗಿಯೇ ಬಂದಿತ್ತು ಹಲಾಲ್ ವಿಷಯ. ಕರಾವಳಿ ಭಾಗದಲ್ಲಿನ ದೇವಸ್ಥಾನಗಳಲ್ಲಿ ಹಿಂದುಯೇತರ ವ್ಯಾಪಾರಿಗಳನ್ನು ನಿರ್ಬಂಧಿಸಲು ನಡೆದಿದ್ದ ಅಭಿಯಾನ.

ಬಳಿಕ ರಾಜ್ಯವ್ಯಾಪಿ ಹರಡಿಕೊಂಡಿದ್ದ ಧರ್ಮ ವ್ಯಾಪಾರ ದಂಗಲ್, ಧಾರವಾಡದ ಸುಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನದಲ್ಲೂ ನಡೆದಿದ್ದ ಗಲಾಟೆ ಹಿಂದುಯೇತ ವ್ಯಾಪಾರಿಗಳನ್ನು ಹೊರಗೆ ಹಾಕುವಂತೆ ಮನವಿ ನೀಡಿದ್ದ ಶ್ರೀರಾಮ ಸೇನೆ.

ಹಿಂದೂಯೇತರ ಕಲ್ಲಂಗಡಿ ಮಾರಾಟಗಾರರನ್ನು ಹೊರಗೆ ಹಾಕುವಾಗ ಕಲ್ಲಂಗಡಿ ಒಡೆದು ಹೋಗಿದ್ದ ಘಟನೆ. ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾದ್ದ ಗಲಾಟೆ. ವಿವಾದದಿಂದ ದೇವಸ್ಥಾನವನ್ನು ಮುಕ್ತವಾಗಿಡಲು ಎಲ್ಲಾ ವ್ಯಾಪಾರಿಗಳನ್ನು ಹೊರಗೆ ಹಾಕಲಾಗಿತ್ತು

ಈಗಲೂ ದೇವಸ್ಥಾನ ಪ್ರಾಂಗಣದ ಹೊರಗಿರೋ ಎಲ್ಲ ವ್ಯಾಪಾರಸ್ಥರು, ಪುನಃ ದೇವಸ್ಥಾನದ ಪ್ರಾಂಗಣದಲ್ಲಿಯೇ ವ್ಯಾಪಾರಕ್ಕೆ ಅವಕಾಶ ಕೊಡಲು ಟ್ರಸ್ಟ್ ಕಮಿಟಿ ಸಭೆಯಲ್ಲಿ ನಿರ್ಣಯ ಅವಕಾಶ ಕೊಡೋದೇ ಆದಲ್ಲಿ ಹಿಂದು ವ್ಯಾಪಾರಿಗಳಿಗೆ ಮಾತ್ರವೇ ಕೊಡಬೇಕು ಎಂದು ಪಟ್ಟು ಹಿಡಿದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ.

ಖಾಸಗಿ ಒಡೆತನಕ್ಕೆ ಸೇರಿರುವ ನುಗ್ಗಿಕೇರಿಯ ದೇವಸ್ಥಾನ. ಧಾರವಾಡದ ದೇಸಾಯಿ ಕುಟುಂಬದವರ ಮಾಲೀಕತ್ವದಲ್ಲಿರುವ ದೇವಸ್ಥಾನ. ಇಲ್ಲಿ ನಡೆಯುವ ಪ್ರತಿ ನಿರ್ಣಯವನ್ನೂ ಈ ಕುಟುಂಬವೇ ಮಾಡುತ್ತೆ.

ಸರ್ಕಾರವಾಗಲಿ, ಯಾರೇ ಆಗಲಿ ಇಲ್ಲಿನ ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಬೇಕಿಲ್ಲ. ಹೀಗಾಗಿ ಹಿಂದೂಗಳಿಗೆ ಮಾತ್ರವೇ ಅವಕಾಶ ಕೊಡಿ ಅನ್ನೋದು ಹಿಂದು ಸಂಘಟನೆಗಳ ಆಗ್ರಹ.

ಒಂದು ವೇಳೆ ಹಿಂದುಯೇತರರಿಗೆ ಅವಕಾಶ ಕೊಟ್ಟಿದ್ದೇ ಆದಲ್ಲಿ ಹೋರಾಟ ಸಹ ಮಾಡುತ್ತೇವೆ ಎನ್ನುವ ಎಚ್ಚರಿಕೆ ನೀಡಲಾಗಿದೆ. ಸದ್ಯ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ, ದೇವಸ್ಥಾನದ ಪರ್ಯಾಯಸ್ಥರಿಗೆ ಲಿಖಿತ ಮನವಿ ನೀಡಿದ್ದಾರೆ.

ಸಕಾರಾತ್ಮಕವಾಗಿಯೇ ಸ್ಪಂದಿಸಿರುವ ಪರ್ಯಾಯಸ್ಥರು. ದೇವಸ್ಥಾನದ ಪ್ರಾಂಗಣದಲ್ಲಿ ಪುನಃ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದೇ ಆದಲ್ಲಿ ಹಿಂದುಗಳಿಗೆ ಮಾತ್ರವೇ ಕೊಡುವ ಭರವಸೆ ನೀಡಿದ್ದಾರೆ.