ಉ.ಕ ಸುದ್ದಿಜಾಲ ವಿಜಯಪುರ :
ಬೇಸಿಗೆ ಮಧ್ಯೆಯೂ ಆಲಮಟ್ಟಿ ಜಲಾಶಯದ ನೀರಿನ ಮೇಲೆ ತೆಲಂಗಾಣ ಸರ್ಕಾರದ ಕಣ್ಣು. ಆಲಮಟ್ಟಿ ಡ್ಯಾಂ ನಿಂದ ಜುಲಾರಾ ಡ್ಯಾಂ ಗೆ ನೀರು ಹರಿಸುವಂತೆ ತೆಲಂಗಾಣ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಪತ್ರ. ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ 5 ಟಿಎಂಸಿ ನೀರು ಹರಿಸುವಂತೆ ಪತ್ರ.
ತೆಲಂಗಾಣಕ್ಕೆ ನೀರು ಬಿಡುಗಡೆ ಮಾಡದಂತೆ ವಿಜಯಪುರ ಜಿಲ್ಲೆಯ ರೈತರು ವಿರೋಧ. ಬ್ರಿಜೇಶ್ ಕುಮಾರ್ ನೇತೃತ್ವದ ಎರಡನೆ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಹಾಕಿದೆ. ಹೀಗಾಗಿ ಆಲಮಟ್ಟಿ ಜಲಾಶಯ ಮಟ್ಟ ಏರಿಕೆಗೆ ಬಿದ್ದಿರೋ ಕೊಕ್ಕೆ. ಇಂತವರಿಗೆ ಯಾಕೆ ರಾಜ್ಯ ಸರ್ಕಾರ ನೀರು ಕೊಡಬೇಕು ಅಂತಿರೋ ರೈತರು..
ಒಂದು ವೇಳೆ ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟರೆ ಹೋರಾಟ ಮಾಡುವ ಎಚ್ಚರಿಕೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಹೋರಾಟದ ಎಚ್ಚರಿಕೆ. ಯಾವುದೇ ಕಾರಣಕ್ಕೂ ತೆಲಂಗಾಣಕ್ಕೆ ನೀರು ಬಿಡದಂತೆ ಒತ್ತಾಯ.
ಈಗಾಗಲೇ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕೇವಲ 58 ಟಿಎಂಸಿ ಯಷ್ಟು ಮಾತ್ರ ನೀರಿನ ಲಭ್ಯತೆ ಇದೆ.. ಮುಂದೆ ಬೇಸಿಗೆ ಹಾಗೂ ಹಿಂಗಾರು ಹಂಗಾಮು ಬೆಳೆಗೆ ನೀರಿನ ಅಗತ್ಯವಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಇದೆ…
ಹೀಗಾಗಿ ಒಂದು ವೇಳೆ ತೆಲಂಗಾಣಕ್ಕೆ ನೀರು ಬಿಟ್ಟರೆ ಉಗ್ರ ಹೋರಾಟದ ಎಚ್ಚರಿಕೆ. ಆಲಮಟ್ಟಿ ಜಲಾಶಯದ ಮಟ್ಟ ಎತ್ತರಕ್ಕೂ ತೆಲಂಗಾಣ ಸರ್ಕಾರದ ವಿರೋಧ ಮಾಡಿದೆ. ಒಂದು ವೇಳೆ ನೀರು ಬಿಟ್ಟಲ್ಲಿ ಜಲಾಶಯದ ಮುಂಭಾಗ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರೈತ ಸಂಘ.
ಬೇಸಿಗೆ ಮಧ್ಯೆಯೂ ಆಲಮಟ್ಟಿ ಜಲಾಶಯದ ನೀರಿನ ಮೇಲೆ ತೆಲಂಗಾಣ ಸರ್ಕಾರದ ಕಣ್ಣು
