ಉ.ಕ ಸುದ್ದಿಜಾಲ ವಿಜಯಪುರ :
ಹಿಂದೂಗಳನ್ನೆ ಟಾರ್ಗೆಟ್ ಮಾಡಿ BPL ಕಾರ್ಡ್ ರದ್ದು. ಹಿಂದೂಗಳ ರೇಶನ್ ಕಾರ್ಡ್ ರದ್ದು ಮಾಡಲಾಗ್ತಿದೆ. ವಿಜಯಪುರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಹಿಂದೂಗಳನ್ನೆ ಟಾರ್ಗೆಟ್ ಮಾಡಿ BPL ಕಾರ್ಡ್ ರದ್ದು – ಯತ್ನಾಳ ಆರೋಪ
ಇದನ್ನೇ ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಸಿದ್ದರಾಮಯ್ಯನೆ ಹೇಳಿದ್ದಾರೆ ಹಿಂದೂಗಳ ವೋಟು ಬೇಡ ಎಂದಿದ್ದಾರೆ. ಹಿಂದೂಗಳ ರೇಶನ್ ಕಡಿತವಾಗ್ತಿದೆ ಎಂದು ನನಗೂ ಮಾಹಿತಿ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಹಿಂದೂಗಳ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಪ್ರಸ್ತಾಪವಾಗ್ತಿದೆ. ರದ್ದಾದ ಗ್ರಾಹಕರ ಯಾದಿ ತೆಗೆದುಕೊಳ್ತೇವೆ. ಇದನ್ನ ಇಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಮಾಡ್ತೇವೆ. ಹಿಂದೂಗಳಿಗೆ ರೇಶನ್ ಕಾರ್ಡನಲ್ಲಿ ಅನ್ಯಾಯವಾಗಬಾರದು.
ಕಾಂಗ್ರೆಸ್ ನವರು ಹಿಂದೂಗಳನ್ನ ಟಾರ್ಗೆಟ್ ಮಾಡ್ತಿದೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ. ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಶನ್ ಕಾರ್ಡ್ ರದ್ದಾಗಿವೆ.
ಇವರ ಟಾರ್ಗೆಟ್ ಹಿಂದೂಗಳು. ವೋಟು ಹಾಕಿಲ್ಲ ಎಂದು ಹಿಂದೂಗಳನ್ನ ಟಾರ್ಗೆಟ್ ಮಾಡಲಾಗ್ತಿದೆ. ಹಿಂದೂಗಳನ್ನ ತುಳಿಯಬೇಕು ಎಂದು ಹೀಗೆ ಮಾಡ್ತಿದ್ದಾರೆ ಎಂದ ಬಸನಗೌಡ ಯತ್ನಾಳ.