ಮೋಳೆ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಇಂದು ಹನುಮಾನ ಹಾಗೂ ಮಹಾದೇವ ದೇವರ ಗರ್ಭ ಗುಡಿಯ ವಾಸ್ತುಶಾಂತಿ ಮೂರ್ತಿ ಪ್ರತಿಷ್ಠಾಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನೂರಾರು ಮಹಿಳೆಯರು ಕುಂಭ ಮೇಳದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಮೋಳೆ ಗ್ರಾಮದ ಭಕ್ತರ ಸಮ್ಮುಖದಲ್ಲಿ ಹೋಮ ಹವನದ ಮೂಲಕ ಗ್ರಾಮದ ಕಷ್ಟ ಕಾರ್ಪಣ್ಯಗಳೆಲ್ಲವು ಕಳೆದು ಹೋಗಲಿ, ಗ್ರಾಮಕ್ಕೆ ಯಾವುದೇ ರೀತಿ ತೊಂದರೆ ಯಾಗಬಾರದು ಎನ್ನುವ ಉದ್ದೇಶದಿಂದ ಹೋಮ ಹವನದ ಮೂಲಕ ಪೂಜೆ ಸಲ್ಲಿಸಲಾಯಿತು. ಮೂರು ದಿನಗಳ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಕೂಡ ನೆರವೆರಿಸಿದ ಕಮಿಟಿ ಸದಸ್ಯರು. ಮಂಗಳವಾರ ವಿವಿಧ ವಾದ್ಯಮೇಳದೊಂದಿಗೆ ಊರಯ ಪ್ರದಕ್ಷಣ ಹಾಕಿ ಹಣಮ ದೇವರ ಮೂರ್ತಿ ಮೆರವಣಿಗೆ ಕೂಡಾ ಆಯೋಜಿಸಲಾಗಿದೆ.