ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಯುವತಿಯೊರ್ವಳು ಬಿಎಸ್‌ಎಫ್ ಯೋಧಳಾಗಿ ಭರ್ತಿಯಾಗಿದ್ದು ಮೋಳೆ ಗ್ರಾಮದ ಕೀರ್ತಿಯನ್ನು ಮತಷ್ಟು ಹೆಚ್ವಿಸಿರುವ ಕೀರ್ತಿ ಈ ಯುವತಿಗೆ ಸಲ್ಲುತ್ತದೆ.
ಮೋಳೆ ಗ್ರಾಮದ ಸರಸ್ವತಿ ಸಿದಗೊಂಡ ಪೂಜೇರಿ ಬಿಎಸ್‌ಎಫ್ ಯೋಧಳಾಗಿ ಭರ್ತಿಯಾಗಿ ಮಧ್ಯಪ್ರದೇಶದಲ್ಲಿ 6 ತಿಂಗಳು ತರಬೇತಿ ಪಡೆದುಕೊಂಡು ತರಬೇತಿ ತರುವಾಯ ರಜೆಯ ಮೇಲೆ ಇದೇ ಪ್ರ ಪ್ರಥಮವಾಗಿ ಸ್ವ ಗ್ರಾಮ ಮೋಳೆಗೆ ಆಗಮಿಸಿದಾಗ ಆತ್ಮೀಯವಾಗಿ ಸ್ವಾಗತಿಸಿ, ಇತಳಿಗೆ ಗ್ರಾಮ ವತಿಯಿಂದ ಶ್ರೀ ಯೋಗಿಸಿಧ್ಧೇಶ್ವರ ದೇವಸ್ಥಾನದಲ್ಲಿ ಆತ್ಮೀಯವಾಗಿ ಎಲ್ಲ ಗಣ್ಯಮಾನ್ಯರ ಸಮ್ಮುಖದಲ್ಲಿ ಸತ್ಕರಿಸಲಾಯಿತು.
ಈ ಸಂಧರ್ಭದಲ್ಲಿ ಬಾಳು ನರೊಟಿ, ಸುರೇಶ ಬಳೋಜನವರ, ಸಿದಲಿಂಗ ಪೂಜೇರಿ, ಆದಪ್ಪ ಪೂಜೇರಿ, ಸೋಮನಿಂಗ ಡಕ್ಕಾವಡೆಯರ, ಹಣಮಂತ ಹಾಲವಡೆಯರ, ಅಮಸಿದ್ದ ನಿಡಗುಂಡಿ, ಮದಗೊಂಡ ಹಾಲವಡೆಯರ, ಮಹಾದೇವ ಹೊನಕುಪ್ಪಿ ಉಪಸ್ಥಿತರಿದ್ದರು. ಹಣಮಂತ ಹಾಲವಡೆಯರ ಇವರು ನಿರೂಪಿಸಿದರು, ಸಿದಲಿಂಗ ಪೂಜೇರಿ ಸ್ವಾಗತಿಸಿ ವಂದಿಸಿದರು.