ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ‌ಸೈನಿಕ ವಸತಿ ಶಾಲೆ. ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಗೆ ವಕ್ಕರಿಸಿದ ಕೊರೊನಾ ವಸತಿ ಶಾಲೆಯಲ್ಲಿದ್ದ 91 ಮಕ್ಕಳಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಶಾಲಾ ಸಿಬ್ಬಂದ್ಧಿಯ ಮಹಾಯಡವಟ್ಟಿಗೆ ವಿದ್ಯಾರ್ಥಿ – ಪೋಷಕರು ಕಂಗಾಲು.

ಕಳೆದ ನಾಲ್ಕು ದಿನಗಳ ಹಿಂದೆ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆ 102 ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಕೊವೀಡ್ ಟೆಸ್ಟ್ ಮಾಡಿಸಿತ್ತು. ನಾಲ್ಕು ದಿನಗಳಲ್ಲಿ ಒಟ್ಟು 82 ಮಕ್ಕಳಿಗೆ, 10 ಶಿಕ್ಷಕರಿಗೆ ಕೊವೀಡ್ ಸೋಂಕು ದೃಢವಾದ ಹಿನ್ನಲೆ ಭಯ ಭೀತರಾಗಿ ತಮ್ಮ ಮಕ್ಕಳನ್ನು ವಸತಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿರುವ ಪೋಷಕರು.