ಮೈಸೂರ :

ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗುವುದು ಹೆಚ್ಚುಗಾರಿಕೆಯಲ್ಲ. ಅವರ ಮನೆಯಲ್ಲಿ ಕೊಡುವ ಕೋಳಿ ತಿನ್ನೋಕಾಗುತ್ತಾ? ಅವರು ಕುರಿಯ ರಕ್ತ ಕೊಟ್ಟರೆ ಕುಡಿಯೋಕಾಗುತ್ತಾ? ಕುರಿಯ ಲಿವರ್ ಕೊಟ್ಟರೆ ತಿನ್ನೋಕಾಗುತ್ತಾ? ಎಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಹಂಸಲೇಖ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮ ರಾಜ್ಯ ಮಟ್ಟದ ಮುಳ್ಳೂರು ನಾಗರಾಜು ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹೇಳಿಕೆ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ ಮೇಲೆ ಎಲ್ಲಾ ರಾಜಕಾರಣಿಗಳು ಅದನ್ನ ಶುರು ಮಾಡಿಕೊಂಡಿದ್ದಾರೆ. ಅದೊಂತರ ಗೀಳಾಗಿಬಿಟ್ಟಿದೆ.‌‌ ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲ. ಅಂಬೇಡ್ಕರ್‌ ಕೊಟ್ಟ ಬಡವರ ಗೀತೆ (ಸಂವಿಧಾನ)ಯಿಂದ ದಲಿತರಿಗೆ ಹೆಚ್ಚು ಸಹಾಯವಾಗಿದೆ. ಅದರಿಂದ ನಾವು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರ ಬಂದಿದ್ದೇವೆ.

ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ