ಉ.ಕ ಸುದ್ದಿಜಾಲ ಅಥಣಿ :

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೇಳೋಕ್ಕೆ ನಾನು ಭವಿಷ್ಯಗಾರನಲ್ಲ ನಾನು ಸಚಿವನಾಗುವದನ್ನ ಹೈ ಕಮಾಂಡ್ ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ನೀವು ಕೂಡ ಸಚಿವ ಸ್ಥಾನದ ಆಕಾಂಕ್ಷಿ ನಾ ಎಂಬ ಮಾಧ್ಯಮಗಳ ಪ್ರಶ್ನೆ ಮಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಶಾಸಕ ಲಕ್ಷ್ಮಣ ಸವದಿ ಮಾತು

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸವದಿ ನಿಮ್ಮ ಮನಸ್ಸಿನಲ್ಲಿ ಏನಿದೇ ಎಂದು ಮರು ಪ್ರಶ್ನಿಸಿದ ಸವದಿ ಈ‌ ಭಾಗದ ಜನರ ಅಭಿಪ್ರಾಯ ನೀವು ಸಚಿವರಾಗಬೇಕು ಎನ್ನುವದಿದೆ ಎಂದ ವರದಿಗಾರರು ಹಾಗಿದ್ದರೇ ನಿಮ್ಮ ಒತ್ತಾಸೆಯನ್ನ ಪಕ್ಷದ ವರಿಷ್ಠರು ಹಾಗೂ ಸಿಎಂ ಅವರು ಪರಿಗಣಿಸಲಿ ಎಂದ ಸವದಿ.

ಪರೋಕ್ಷವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ಸವದಿ ಅಥಣಿ ಜಿಲ್ಲೆಯಾಗಬೇಕು ಎನ್ನುವ ಬೇಡಿಕೆ ಇದೆ ಅಥಣಿ ಜಿಲ್ಲೆ ಆಗಬೇಕು ಎನ್ನುವ ಹಕ್ಕನ್ನ ಮಂಡನೆ ಮಾಡುತ್ತೇನೆ ಬಸವೇಶ್ವರ ಏತ ನೀರಾವರಿ ಯೋಜನೆ ವಿಳಂಬ ವಿಚಾರ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಬಕೆಲವೇ ದಿನಗಳಲ್ಲಿ ಮೊದಲನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುವುದು.

ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಲ್ಲಿ ಕ್ರೆಡಿಟ್ ವಾರ್ ವಿವಾದ ಯಾರೂ ಕ್ರೆಡಿಟ್ ತೆಗೆದುಕೊಳ್ಳುವದು ಏನೂ ಇಲ್ಲ. ಮತದಾರರು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ತೀರ್ಮಾನ ಮಾಡಿದ್ದರು. ಎಲ್ಲರ ಒಗ್ಗಟ್ಟಿನಿಂದ, ಗ್ಯಾರಂಟಿಗಳಿಂದ ಪಕ್ಷ ಗೆಲುವು ಸಾಧಿಸಿದೆ.

ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಕಲ್ಯಾಣ ಕರ್ನಾಟಕ ಮಾದರಿಯಂತೆ ಕಿತ್ತೂರು ಕರ್ನಾಟಕ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಪ್ರಾಧಿಕಾರಕ್ಕೆ 3 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು.

ದಕ್ಷಿಣ, ಉತ್ತರ ಕರ್ನಾಟಕ ವ್ಯತ್ಯಾಸ ಸರಿದೂಗಿಸಲು ಪ್ರಾಧಿಕಾರ ಸ್ಥಾಪನೆ‌ ಮಾಡಬೇಕು ಕಿತ್ತೂರು ಕರ್ನಾಟಕದ ಶಾಸಕರೆಲ್ಲ ಸೇರಿ ಈ ಕುರಿತು ಸಭೆ ಮಾಡುತ್ತೇವೆ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಶಾಸಕ ಹಾಗೂ‌ ಮಾಜಿ ಡಿಸಿಎಂ ಸವದಿ ಹೇಳಿಕೆ ನೀಡಿದ್ದಾರೆ.