ಉ.ಕ ಸುದ್ದಿಜಾಲ ತುಮಕೂರು :

ಇಬ್ಬರು ಅತ್ಯಾಚಾರದ ಅಪರಾಧಿಗಳಿಗೆ ಶಿಕ್ಷ ಪ್ರಕಟ, ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ, ಯುವತಿಯರ ಮೇಲೆ ನಡೆದಿದ್ದ ಅತ್ಯಾಚಾರ‌ ಪ್ರಕರಣ.

ಅತ್ಯಾಚಾರ ಎಸಗಿದ್ದ ಆರೋಪಿಗಳ ಆರೋಪ ಸಾಬೀತು ಹಿನ್ನೆಲೆ. ಅತ್ಯಾಚಾರ ಎಸಗಿದ್ದ ಇಬ್ಬರು ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ, ಹಾಗೂ ತಲಾ 1 ಲಕ್ಷದ 62 ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಕಟ.

ತುಮಕೂರಿನ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ‌ ಶಿಕ್ಷೆ ವಿಧಿಸಿ ಆದೇಶ. ನ್ಯಾಯಾಧೀಶರಾದ ಹೆಚ್. ಅನಂತ್ ಅವರಿಂದ ಶಿಕ್ಷೆ ಪ್ರಕಟ. ಮಹಂತೇಶ್, ಶ್ರೀನಿವಾಸ್‌ ಶಿಕ್ಷೆಗೆ ಒಳಗಾದ ಅಪರಾಧಿಗಳು.

9-07-2012 ರಂದು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಯುವತಿಯ ಅತ್ಯಾಚಾರ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ಮಾಡಿದ್ದ ಆರೋಪಿಗಳು. ಅತ್ಯಾಚಾರ ಮಾಡಿ, ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು.

ನಿರ್ಭಯಾ ಕೇಸ್‌ಗೂ ಮೂರು ತಿಂಗಳ ಮೊದಲು ನಡೆದಿದ್ದ ಪ್ರಕರಣ. ಮೂವರು ಗೆಳತಿಯರ ಪೈಕಿ ಓರ್ವ ಯುವತಿಯ ಮೇಲೆ ಅತ್ಯಾಚಾರ. ನಂತರ ಯುವತಿಯಿಂದ ಶಿರಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆಯಲ್ಲಿ ಬೆಳಕಿಗೆ ಬಂದಿತ್ತು ಮತ್ತೋರ್ವ ಯುವತಿ ಮೇಲಿನ ಅತ್ಯಾಚಾರ. ಓರ್ವ ಕಾರು ಡ್ರೈವ್ ಮಾಡುತ್ತಿದ್ದರೆ, ಮತ್ತೊಬ್ಬ ಅತ್ಯಾಚಾರ ಮಾಡುತ್ತಿದ್ದ. ಹೀಗೆ ಇಬ್ಬರು ಯುವತಿಯರ ಮೇಲೆ‌ ನಡೆದಿದ್ದ ಅತ್ಯಾಚಾರ.

ಈ ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಕೆ. ಪ್ರಹ್ಲಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಹೆಚ್. ಅನಂತ್ ಅವರಿಂದ ಶಿಕ್ಷೆ ಪ್ರಕಟ. ಸರ್ಕಾರಿ ಅಭಿಯೋಜಕಿಯಾಗಿ ವಿ.ಎ.ಕವಿತ ವಾದ ಮಂಡಿಸಿದ್ರು.