ಉ.ಕ ಸುದ್ದಿಜಾಲ ಕಾಗವಾಡ :

ಮಗನ ನಡವಳಿಕೆ ಹಾಗೂ ದಿನೇ ದಿನೇ ಜಗಳಕ್ಕೆ ಬೇಸತ್ತು ತಂದೆಯೆ ಮಗನನ್ನ ಕೊಂದ ಹೃದಯ ವಿದ್ರಾವಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದಲ್ಲಿ ನಡೆದಿದೆ.

ಉಗಾರ ಬಿ.ಕೆ ಗ್ರಾಮದ ಜಿನಪ್ಪ ಕಾಂಜಿ ರನ್ನ ಸ್ವಂತ ಮಗನಾದ ಭರತೇಶ ಕಾಂಜಿ (30) ಕೊಲೆ ಮಾಡಿದ್ದಾನೆ. ಭರತೇಶ ಅತಿಯಾದ ಕುಡಿತದ ಚಟ ಹೊಂದಿದ್ದನು. ಕುಡಿಯಲು ಹಣ ಕೊಡು ಎಂದು ತಂದೆ ಜಿನಪ್ಪನನ್ನ ಕಾಡುತ್ತಿದ್ದ, ಹೀಗೆ ದಿನಂಪ್ರತಿ‌ ಕಾಟಕ್ಕೊಳಗಾಗಿದ್ದ ಜಿನಪ್ಪ. ಇಂದು ಮತ್ತೆ ಹಣ ಕೊಡು ಎಂದು ಕಾಡುತ್ತಿದ್ದ, ಇಬ್ಬರು ಮಧ್ಯ ಕೈ ಕೈ ಮಿಲಾಸುವಷ್ಟು ಜಗಳವಾಗಿದೆ.

ಜಗಳ ವಿಕೊಪ್ಪಗೊಂಡು ಜಿನಪ್ಪ ಹರಿತಾದ ಆಯುಧದಿಂದ ಭರತೇಶ ಹೊಡೆದ ಪರಿಣಾಮ ಭರತೇಶ ಸಾವನಪ್ಪಿದ್ದಾನೆ. ಮಗ ಭರತೇಶ ವಿಪರಿತ ಕುಡಿತ ಚಟ ಹೊಂದಿದ್ದ ಹಲವಾರು ಬಾರಿ ಹಣ ನೀಡುವಂತೆ ತಂದೆ ಜಿನಪ್ಪನನ್ನ ಕಾಡುತ್ತಿದ್ದ.

ಹಲವಾರು ಬಾರಿ ಅಪ್ಪ ಹಾಗೂ ಮಗನ ನಡುವೆ ದುಡ್ಡಿಗಾಗಿ ಜಗಳ ಇಂದು ಮಧ್ಯಾಹ್ನ ಮತ್ತೆ ಕುಡಿಯಲು ಹಣ ಕೇಳಿದ ಭರತೇಶ ತಂದೆ ಜಿನಪ್ಪ ಹಣ ನೀಡದೆ ಇದ್ದಾಗ ಮಗ ಭರತೇಶ ಜಿನಪ್ಪನ ನಡುವೆ ಜಗಳ ವಿಕೋಪಕ್ಕೆ ತಿರುಗಿ ತಂದೆ ಜಿನಪ್ಪ ಹರಿತಾದ ಆಯುಧದಿಂದ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಕಾಗವಾಡ ಪೋಲಿಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.