ಉ.ಕ ಸುದ್ದಿಜಾಲ ಕಾಗವಾಡ :

ಸಚಿವ ಸಂಪುಟ ವಿಚಾರವಾಗಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ ಆಪ್ತ ಸ್ನೇಹಿತ ಅಥಣಿ ಶಾಸಕ ಲಕ್ಷ್ಮಣ ಸವದಿ ಪರ ಧ್ವನಿ ಎತ್ತಿದ್ದಾರೆ ನಾನೂ ಕೂಡಾ ಸಚಿವ ಆಕಾಂಕ್ಷಿ ಎಂದ‌ ಕಾಗವಾಡ ಶಾಸಕ ರಾಜು ಕಾಗೆ.

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನ ಸಭಾ ವ್ಯಾಪ್ತಿಯ ಶಿರೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಚಿವ ಸಂಪುಟ ವಿಚಾರದಲ್ಲಿ ನನಗು ಕೂಡ ಸಚಿವನಾಗುವ ಆಸೆ ನಿಭಾಯಿಸಬಲ್ಲ ಶಕ್ತಿ ಕೂಡ ನನ್ನಲ್ಲಿದೆ ನನಗೆ ಕೊಟ್ಟರೆ ಸಂತೋಷ ಪಡ್ತೀನಿ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ರೆ ಒಪ್ಪಿಗೆ ಅವರು ರಾಜಕೀಯದಲ್ಲಿ ಹಿರಿಯರು ಅವರಿಗೆ ಸಚಿವ ಸ್ಥಾನ ನೀಡಿದ್ರೆ ಸಂತೋಷ ಎಂದು ಹೇಳಿದರು.

2 ಎ ಮೀಸಲಾತಿ ವಿಚಾರವಾಗಿ ಮಾತನಾಡುತ್ತ 2 ಎ ಮೀಸಲಾತಿ ಬಹು ಸಂಖ್ಯಾತ ಬಡ ಮಕ್ಕಳ ಉಜ್ವಲ ಬಜಾವಿಷ್ಯಕ್ಕಾಗಿ ನಡೆದ ಹೋರಾಟ ಆ ಹೋರಾಟವನ್ನ ನಾವು ಕೂಡ ಸ್ವಾಗತಿಸುತ್ತೇವೆ.