ಉ.ಕ ಸುದ್ದಿಜಾಲ ಮಹಾರಾಷ್ಟ್ರ :

ಮಹಿಳೆಗೆ ಹಿಗ್ಗಾ ಮುಗ್ಗ ಥಳಿತ ವ್ಯಕ್ತಿಯ ಕೃತ್ಯಕ್ಕೆ ನೆಟ್ಟಿಗರು ಗರಂ ನೀರಿನ ವಿಚಾರವಾಗಿ ಮಹಿಳೆಯನ್ನು ಹಿಗ್ಗಾಮುಗ್ಗ ಥಳಿತ ಮಹಾರಾಷ್ಟ್ರದ ಜತ್ತ ತಾಲೂಕಿನ ಕರ್ನಾಟಕ ಗಡಿ ಹೊಂದಿಕೊಂಡಿರುವ ಗೂಗವಾಡ ಗ್ರಾಮದಲ್ಲಿ ಘಟನೆ‌ ನಡೆದಿದೆ.

ಸ್ವಂತ ಚಿಕ್ಕಪ್ಪನ ಮಗನಿಂದಲೇ ಮಹಿಳೆ ಹಾಗೂ ವೃದ್ಧ ದಂಪತಿಗಳ ಮೇಲೆ ಕಟ್ಟಿಗೆಯಿಂದ ಮಾರನಾಂತಿಕವಾಗಿ ಹಲ್ಲೆ ಹಲ್ಲೆ ಮಾಡಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಗೂಗವಾಡ ಗ್ರಾಮದ ವಿಲಾಸ್ಮತಿ ಜಾಂಬಗೊಂಡ,(33) ಶಿವಮೂರ್ತಿ ದರೂರ, (67) ಮತ್ತು ಸಹಾದೇವಿ ದರೂರ (65) ಈ ಮೂವರ ಮೇಲೆ ಹಲ್ಲೆ ಮಾಡಲಾಗಿದೆ.

ಅದೇ ಗ್ರಾಮದ ಮಲ್ಲಿಕಾರ್ಜುನ ದರೂರ, (36) ಹಾಗೂ ಶ್ರೀಶೈಲ ದರೂರ, ಹಲ್ಲೆ ಮಾಡಿದ್ದಾರೆ.‌ ಜಮೀನು ವಿಚಾರವಾಗಿ ಆಗಾಗಾ ಜಗಳ ನಡೆಯುತ್ತಲೇ ಇತ್ತು. ಜಗಳ ವಿಕೋಪಕ್ಕೆ ತಿರುಗಿ ಬಡಿಗೆಯಿಂದ ಹೊಡೆದುಕೊಂಡಿದ್ದು ಹಲವರಿಗೆ ಗಾಯಗಳಾಗಿವೆ.

ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಗಲಾಟೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಮಲ್ಲಿಕಾರ್ಜುನ ಹಾಗೂ ಶ್ರೀಶೈಲ ಇಬ್ಬರು ಮಹಿಳೆಗೆ ಕಟ್ಟಿಗೆಯಿಂದ ಹಿಗ್ಗಾ ಮುಗ್ಗ ಥಳಿತ.

ಮಹಾರಾಷ್ಟ್ರದ ಜತ್ತ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಜತ್ತ ಪೋಲಿಸರು ಕಾಟಾಚಾರಕ್ಕೆ ಪ್ತಕರಣ ದಾಖಲಿಸಿದ್ದಾರೆ ಎಂದು ಸಂತ್ರಸ್ಥ ಮಹಿಳೆ ವಿಲಾಸ್ಮತಿ ಆರೋಪ ಮಾಡಿದ್ದಾರೆ.