ರಾಮನಗರ :
ನಟ ಪುನೀತ್ ರಾಜಕುಮಾರ್ ಅಭಿಮಾನಿ ನ.4 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ, ಅಭಿಮಾನಿಯ ಕುಟುಂಬಕ್ಕೆ ನಟ ರಾಘವೇಂದ್ರರಾಜಕುಮಾರ್ ಸಾಂತ್ವಾನ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಡಾವಣೆಯಲ್ಲಿ ಕಳೆದ 4 ನೇ ತಾರೀಖು ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿ ವೆಂಕಟೇಶ್ (25) ಆತ್ಮಹತ್ಯೆ ಮಾಡಿಕೊಂಡಿದ್ದು ಇತ. ಕ್ಷೌರಿಕ ವೃತ್ತಿ ಮಾಡ್ತಿದ್ದ ಪುನೀತ್ ನಿಧನದ ಬಳಿಕ ಸಂಪೂರ್ಣ ಖಿನ್ನತೆಗೆ ಒಳಗಾಗಿ ಊಟ ಬಿಟ್ಟು ಕಂಗಾಲಾಗಿದ್ದ ವೆಂಕಟೇಶ್.
ಇಂದು ಪುನೀತ್ ಅಭಿಮಾನಿ ಮನೆಗೆ ರಾಘವೇಂದ್ರರಾಜಕುಮಾರ್ ಭೇಟಿ ಮಾಡಿ ಅರ್ಧಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿದರು. ನಿಮ್ಮ ಜೊತೆಗೆ ನಾವಿದ್ದೇವೆ ಧೈರ್ಯವಾಗಿರಿ ಎಂದು ಸಾಂತ್ವಾನ ಹೇಳಿದ್ದಾರೆ.