ಉ.ಕ ಸುದ್ದಿಜಾಲ ವಿಜಯಪುರ :
ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಗಳ ನೇಮಕ ವಿಚಾರ. ವಿಜಯಪುರದಲ್ಲಿ ಅಸಮಾಧಾನ ಹೊರಹಾಕಿದ ಯತ್ನಾಳ. ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ.
ಹಿಂದೆ ಕೆಜೆಪಿ ಇತ್ತಲ್ಲ, ಕೆಜೆಪಿ ಪಾರ್ಟ್ – 2 ಕೆಜಿಎಫ್ ಪಾರ್ಟ್ 1, ಪಾರ್ಟ್ 2 ಇದ್ದಂತೆ. ಬಿಜೆಪಿಯಲ್ಲಿ ಕೆಜೆಪಿ ಯಡಿಯೂರಪ್ಪಂದು ಕೆಜಿಪಿ ಪಾರ್ಟ್ 1, ಕೆಜೆಪಿ 2 ವಿಜಯೇಂದ್ರನದ್ದು, ಅವರ ಮೊಮ್ಮಗನದ್ದು ಕೆಜೆಪಿ 3 ಎಂದು ವಾಗ್ದಾಳಿ. ಯಡಿಯೂರಪ್ಪ – ವಿಜಯೇಂದ್ರ ವಿರುದ್ಧ ಯತ್ನಾಳ್ ಕೆಂಡಾಮಂಡಲ.
ಸ್ಥಾನಮಾನಗಳ ಆಯುಷ್ಯಲೋಕಸಭಾ ಚುನಾವಣೆ 2024. 28 ಸೀಟ್ ತರ್ತೀನಿ ಎಂದಿದ್ದಾರೆ. 28 ರಲ್ಲಿ ಒಂದೆ ಸೀಟ್ ಕಡಿಮೆ ಬಿದ್ದರು ಈ ಇದೆಲ್ಲ ದಬ..ದಬ.. ಅಂತಾ ಬಿದ್ದು ಬಿಡುತ್ತೆ. ಸಿಗರೇಟ್ ಪ್ಯಾಕೇಟ್‌ನಿಂದ ಆಟವಾಡಲು ಜೋಡಿಸಿದ ಗೋಪುರ ಬೀಳುವಂತೆ ಬಿದ್ದು ಬಿಡುತ್ತೆ ಎಂದ ಯತ್ನಾಳ್.
ಬಿಜೆಪಿಯಲ್ಲಿ ಸ್ಥಾನಮಾನ ಹಂಚಿಕೆ ವಿಚಾರ – ಯತ್ನಾಳ್‌ಗೆ ನಿರಾಸೆ ವಿಚಾರ??! ನನಗೇನು ನಿರಾಸೆ ಆಗಿಲ್ಲ. ಪಕ್ಷದಲ್ಲಿ ಲಪುಟರದ್ದೆ ಜಾಸ್ತಿ ಆಗಿದೆ,
ಮೌಲ್ಯಾಧಾರಿತ ರಾಜಕಾರಣ ಇಲ್ಲ. ಹಲ್ಕಾ ಕೆಲಸ ಮಾಡ್ತಾರೆ, ಕಳ್ಳರೆ ಲಫಂಗರೆ ಹೆಚ್ಚು ಸೇರ್ತಿದ್ದಾರೆ. ಒಳ್ಳೆಯವರಿಗೆ ಬ್ಲಾಕ್ಮೇಲ್ ಮಾಡ್ತಾರೆ. ನಾನು ಒಳ್ಳೆ ಕೆಲಸ ಮಾಡಿದ್ದೇನೆ ಆತ್ಮತೃಪ್ತಿ ಇದೆ.
ಯತ್ನಾಳ್ ಸ್ಪೋಟಕ ಹೇಳಿಕೆ
ಲೋಕಸಭೆ ಚುನಾವಣೆ ಬಳಿಕ ಹೊಸ ತಿರುವು ಎಂದ ಯತ್ನಾಳ್ 2024 ಲೋಕಸಭೆ ಚುನಾವಣೆ ಬಳಿಕ ಮೇಜರ್ ಆಫರೇಶನ್ ಮಾಡದೆ ಇದ್ದರೆ ಮುಂದಿನ ನಿರ್ಣಯ ಮಾಡ್ತೇವೆ ಎಂದ ಯತ್ನಾಳ್. ರಾಜಕೀಯ ಬಿಟ್ಟು ಸಾರ್ವಜನಿಕವಾಗಿ ಕೆಲಸ ಮಾಡಬಹುದು. ನನ್ನ ಸಂಸ್ಥೆಗಳು ಇವೆ. ನಾನು ಕೆಲಸ ಮಾಡಬಹುದು.
2028ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಲ್ಲಿ ವಿಜಯಪುರ ಮೂರು ಆಗ್ತಾವೆ. ನಾನು ಕೇಂದ್ರಕ್ಕೆ ಹೋಗಲ್ಲ. ನಾನು ಸಿಎಂ ಆಗೋದಿದ್ದರೇ ಯಾರು ತಪ್ಪಿಸಲು ಆಗಲ್ಲ. ನಾನು ಆಗದೆ ಇದ್ದರೆ ಹತಾಶೆ ಇಲ್ಲ. ಸಿಎಂ ಆದವರು ಈಗ ಎಲ್ಲಿದ್ದಾರೆ?. ಕೆಲ ಮಾಜಿ ಸಿಎಂ ಗಳನ್ನ ಯಾರಾದ್ರೂ ಮಾತನಾಡಿಸ್ತಾರಾ?.
ಯಡಿಯೂರಪ್ಪ, ಶೆಟ್ಟರ್ ಗೆ ಟಾಂಗ್ ಕೊಟ್ಟ ಯತ್ನಾಳ್, ಕರ್ನಾಟಕದ ಕೆಲ ಮಾಜಿ ಸಿಎಂಗಳಿಗೆ 100 ಜನರನ್ನ ಸೇರಿಸೋಕೆ ಹೇಳಿ. ಯಡಿಯೂರಪ್ಪ ಕೇಂದ್ರದವರನ್ನ ಅಂಜಿಸಿದ್ದಾರೆ. ಮಗನ ಉದ್ಧಾರ ಮಾಡದೆ ಇದ್ದರೆ ಲೋಕಸಭೆಯಲ್ಲಿ ಕೆಲಸ ಮಾಡಲ್ಲ ಎಂದಿದ್ದಾರೆ. ಹಾಳಾಗಿ ಹೋಗಲಿ ಎಂದು ಅಧಿಕಾರ ಕೊಟ್ಟಿದ್ದಾರೆ…
ಹೈಕಮಾಂಡ್ ಕಳ್ಳರ ಕೈಯ್ಯಲ್ಲಿ ಕೀಲಿ ಕೊಟ್ಟಿದ್ದಾರೆ ಎಂದ ಯತ್ನಾಳ್, ಕಳ್ಳರ ಕೈಯ್ಯಲ್ಲಿ ಕೀ ಕೊಟ್ಟಿದ್ದಾರೆ, ಅವನು ಹೇಗೆ ಕಳ್ತನ ಮಾಡ್ತಾನೆ. ಈ ಕೀ 2024 ವರೆಗೆ ಮಾತ್ರ ಎಂದ ಯತ್ನಾಳ್. ಪರೋಕ್ಷವಾಗಿ ಲೋಕಸಭೆ ಬಳಿಕ ವಿಜಯೇಂದ್ರ ಅಧಿಕಾರ ವಾಪಸ್ ಎಂದ ಯತ್ನಾಳ್. 28 ಸೀಟ್ ಬರದೆ ಹೋದ್ರೆ ಕೀ ಕಸಿದುಕೊಳ್ತಾರೆ.