ಉ.ಕ ಸುದ್ದಿಜಾಲ ಸಂಕೇಶ್ವರ :

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ಬೈಕ್ ನಿಯಂತ್ರಣ ತಪ್ಪಿ ರಸ್ತೆ ಅಪಘಾತವಾಗಿದೆ. ಸ್ಥಳದಲ್ಲಿಯೇ ಮೂವರ ಯುವಕರ ಸಾವು, ಓರ್ವನ‌ ಸ್ಥಿತಿ ಚಿಂತಾಜನಕವಾಗಿದೆ.

ಸಂಕೇಶ್ವರ ಪಟ್ಟಣದ ಬಸವರಾಜ ಮಾಳಿ 23, ಪ್ರವೀಣ ಸನದಿ 24 ಹಾಗೂ ಮೆಹಬೂಬ ಶೇಗಡಿ 23 ಮೃತ ದುರ್ದೈವಿಗಳು ಮಲಿಕ್ ಜಮಾದಾರ್ ಎಂವ ಯುವಕನ ಸ್ಥಿತಿ ಚಿಂತಾಜನಕ, ಗಾಯಾಳುವಿಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ‌. ಒಂದೇ ಬೈಕಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ಯುವಕರು.

ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಅಪಘಾತ. ಸ್ಥಳಕ್ಕೆ ಸಂಕೇಶ್ವರ ಪೊಲೀಸ್ ಇನ್ಸಪೆಕ್ಟರ್ ಪ್ರಲ್ಹಾದ ಚನ್ನಗಿರಿ, ಪಿಎಸ್ಐ ಗಣಪತಿ ಕೊಂಗನೊಳ್ಳಿ ಭೇಟಿ ಪರಿಶೀಲನೆ ನಡೆಸಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.