ಉ.ಕ ಸುದ್ದಿಜಾಲ ಚಿಕ್ಕೋಡಿ :

ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ಸಂಜು ಉದ್ಪಪ್ಪಾ ವಡ್ಡರಗಾವಿ (37) ಎಂಬಾತನನ್ನು ಚಿಕ್ಕೋಡಿ ಪೊಲೀಸರು  ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದ ಆಶಾಕಾರ್ಯಕರ್ತೆ ಬಾರತಿ ವಿಠ್ಠಲ ಆಕಳೆ (27) ಇವರ ಗಂಡ ಸಾರಾಯಿ ಚಟದ ದಾಸನಾಗಿದ್ದ. ಕುಡಿತದ ಚಟ ಬಿಡಿಸಲು ಔಷಧ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ, ಮನೆಗೆ ಕರೆದುಕೊಂಡು ಹೋಗಿದ್ದ ಸಂಜು, ನೊಂದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಕ್ರೈಂ ನಂಬರ  34/22  ಕಲಂ 376 511 ಅಯ್.ಪಿ ಸಿ ಅಡಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.