ಉ.ಕ ಸುದ್ದಿಜಾಲ ಪುಣೆ :
ಮತ್ತೆ ಪುಂಡಾಟ ಮೆರೆದ ಮಹಾರಾಷ್ಟ್ರದ ಪುಂಡರು. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಾಲಕನ ಮುಖಕ್ಕೆ ಮಸಿ ಬಳಿದು ಪುಂಡಾಟ. ಮಹಾರಾಷ್ಟ್ರದಲ್ಲಿ ಮುಂದುವರೆದ ಮರಾಠಿಗರ ಪುಂಡಾಟ.
ಕಲಬುರಗಿ ಜಿಲ್ಲೆಯ ಆಳಂದ ಡಿಪೋಗೆ ಸೇರಿದ ಸಾರಿಗೆ ಬಸ್ ಚಾಲಕನ ಮುಖಕ್ಕೆ ಮಸಿ ಬಳಿದ ಪುಂಡರು. ಜೈ ಮಹಾರಾಷ್ಟ್ರ ಎಂದು ಹೇಳಿಸಿ, ಮುಖಕ್ಕೆ ಕಪ್ಪು ಮಸಿ ಬಳಿದು ಪುಂಡಾಟ. ನಿನ್ನೆ ಸಂಜೆ ಮಹಾರಾಷ್ಟ್ರದ ಪುಣೆ ನಗರದ ಹೊರವಲಯದಲ್ಲಿ ಘಟನೆ.
ಬಸ್ ತಡೆದು, ಚಾಲಕನ ಸಾದೀಕ್ ಮುಖಕ್ಕೆ ಕಪ್ಪು ಮಸಿ ಬಳಿದ ಪುಂಡರು. ಬಸ್ ಮೇಲೆ ಜೈ ಮಹಾರಾಷ್ಟ್ರ, ಜೈ ಮರಾಠಿ ಎಂದು ಬರೆದ ದುರುಳರು. ಘಟನೆ ನಡುವೆಯೂ ಮಹಾರಾಷ್ಟ್ರಕ್ಕೆ ಮುಂದುವರಿದ ಸಾರಿಗೆ ಬಸ್ ಸಂಚಾರ.
ಮತ್ತೆ ಪುಂಡಾಟ ಮೆರೆದ ಮಹಾರಾಷ್ಟ್ರದ ಪುಂಡರು
