ಉ.ಕ ಸುದ್ದಿಜಾಲ ಕೋಲಾರ :

ಮಾವಿನ ತೋಪಿನಲ್ಲಿ ಕತ್ತು ಸೀಳಿ ವೃದ್ಧನ ಬರ್ಬರ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಇಂದಿರಾನಗರದ ಬಳಿ ನಡೆದಿದೆ.

ಮುನಿಸ್ವಾಮಿ (62) ಕೊಲೆಯಾದ ದುರ್ದೈವಿ ಶ್ರೀನಿವಾಸಪುರದ ಗುಂಡುಮನತ್ತ ಗ್ರಾಮದ ನಿವಾಸಿ ಮೃತ ಮುನಿಸ್ವಾಮಿ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುರಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತಿದ್ದ ಮೃತ ಮುನಿಸ್ವಾಮಿ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.