ಉ.ಕ ಸುದ್ದಿಜಾಲ ಬೆಳಗಾವಿ :
ಈ ಕೂಡಲೇ ಕಬ್ಬುದರ ಏರಿಕೆ ಬಗ್ಗೆ ಸಿಎಂ ಭರವಸೆ ಈಡೇರಿಸಲಿ ಇಲ್ಲದಿದ್ದರೆ ಡಿ.26 ರಿಂದ ಉಪವಾಸ ಸತ್ಯಾಗ್ರಹ ಮಾಡ್ತೇವೆ ಎಂದು ಬೆಳಗಾವಿಯಲ್ಲಿ ಕಬ್ಬು ಉತ್ಪಾದಕ ಸಂಘದ ರಾಜ್ಯಾದ್ಯಕ್ಷ ಕುರುಬರ ಶಾಂತಕುಮಾರ ಹೇಳಿದರು.
ಡಿ.30 ಒಳಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಡಿ.31 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆಮುತ್ತಿಗೆ ಹಾಕ್ತೇವೆ. ಈಗಾಗಲೇ ಬೆಂಗಳೂರಿನಲ್ಲಿ 33 ದಿನದಿಂದ ನಿರಂತರ ಆಹೋರಾತ್ರಿ ಧರಣಿ ನಡೆದಿದೆ. ಆದರೆ, ಡಿ.26 ರಿಂದ ನಿರಂತರ ಉಪವಾಸ ನಡೆಸಲು ತೀರ್ಮಾನಿಸಲಾಗಿದೆ.
ಕಬ್ಬಿನ ಎಫ್ಆರ್‌ಪಿ ದರ ಏರಿಕೆ ಆಗಬೇಕು. ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ಹಣವನ್ನೇ ಪಾವತಿಸಿಲ್ಲ. ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ. ಎಫ್ಆರ್‌ಪಿ ನಿಯಮ ಪ್ರಕಾರ 14 ದಿನದಲ್ಲಿ ಹಣ ಪಾವತಿಸಬೇಕು.
ಆದರೂ ಕಾರ್ಖಾನೆಗಳು ಉಲ್ಲಂಘನೆ ಮಾಡ್ತೀವೆ. ಕಾರ್ಖಾನೆಗಳು ಸಾವಿರಾರು ಕೋಟಿಗೂ ಹೆಚ್ಚು ಹಣ ಕಾನೂನು ಭಾಹಿರವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. 21 ಸಕ್ಕರೆ ಕಾರ್ಖಾನೆ ತೂಕದ ಯಂತ್ರದ ಮೇಲೆ ದಾಳಿ ಮಾಡಿದ ವರದಿ ಸರ್ಕಾರ ಬಹಿರಂಗ ಪಡಿಸಬೇಕು.