ಉ.ಕ ಸುದ್ದಿಜಾಲ ಚಿಕ್ಕೋಡಿ :

ಕಡಿಮೆ ಜ‌ನಸಂಖ್ಯೆ ಇರುವ ಗ್ರಾಮದ ಮಕ್ಕಳು ಹಾಗೂ ತೋಟದಲ್ಲಿ ವಸತಿ ಇರುವ ಮಕ್ಕಳಿಗೆ‌ ಅನಕೂಲವಾಗಲಿ ಅವರ ವಿದ್ಯಾಭ್ಯಾಸ ಮೊಟಕುಗೊಳ್ಳಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ 8 ನೇ ತರಗತಿ ಓದುವ ಮಕ್ಕಳಿಗೆ ಉಚಿತವಾಗಿ ಸೈಕಲ್ ನೀಡುವ ಯೋಜನೆಯನ್ನ ಜಾರಿಗೊಳಿಸಿತು.

ಆದರೆ, ಕಳೆದ ಮೂರ್ನಾಲ್ಕು ವರ್ಷದಿಂದ ವಿದ್ಯಾರ್ಥಿಗಳಿಗೆ ಸೈಕಲ್ ನೀಡದೆ ಇರುವುದರಿಂದ ವಿದ್ಯಾರ್ಥಿಗ ಕಲಿಗೆ ತೊಂದರೆಯಾಗಿದೆ‌. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕೆಲ ತಾಲೂಕುಗಳು ವಿದ್ಯಾರ್ಥಿಗಳು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಹಾಗೂ ತೋಟದ ವಸತಿ ಮತ್ತು ಕೆಲ ಸಣ್ಣ ಗ್ರಾಮದಿಂದ ಪ್ರೌಢ ಶಾಲೆಗೆ ಬರಬೇಕಾದರೆ ಸುಮಾರು ಮೂರ್ನಾಲ್ಕು ಕಿ.ಮೀ ಒರುವುದಿಂದ ಮಕ್ಕಳಿಗೆ ಶಾಲೆಗೆ ಬರಲು ಅನಾನಕೂಲವಾಗುತ್ತಿದೆ‌.

ಅಂದಿನ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿ  ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆ ಜಾರಿಗೆ ತಂದಿತ್ತು ಮಾತಿನಂತೆ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲಾಗುತ್ತಿತ್ತು.

ಆದರೆ ಇವತ್ತಿನ ಬಿಜೆಪಿ ಸರ್ಕಾರ ಇದನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ವಿದ್ಯಾರ್ಥಿಗಳು ಆಕ್ರೋಶವನ್ನ ಹೊರ ಹಾಕುತಿದ್ದಾರೆ.