ಉ.ಕ ಸುದ್ದಿಜಾಲ ಅಥಣಿ :
ಶೆಟ್ಟರ್ ಬಿಜೆಪಿಗೆ ಹೊಗಿದ್ದ ಅನಿರೀಕ್ಷಿತ ಬೆಳವಣಿಗೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಸವದಿ ಸ್ಪಷ್ಟನೆ ಅಥಣಿಯಲ್ಲಿ ಗಣರಾಜೋತ್ಸವ ಬಳಿಕ ಸವದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಗೆ ನನ್ನ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಲೋಕಸಭೆ ಚುನಾವಣೆ ಸಮೀಪದಲ್ಲಿ ಹಲವು ರಾಜಕೀಯ ನಾಯಕರು ನನಗೆ ಬಿಜೆಪಿಗೆ ಬರುವಂತೆ ಒತ್ತಾಯಿಸಿದ್ದು ನಿಜ. ಆದರೆ, ನಾನು ಅವರ ಹೆಸರು ಬಹಿರಂಗ ಮಾಡುವುದಿಲ್ಲ
ಎರಡೆ ದಿನಗಳಲ್ಲಿ ಜಗದೀಶ ಶೆಟ್ಟರ ಚಟುವಟಿಕೆ ಪ್ರಾರಂಭವಾಗಿತ್ತು. ನಿನ್ನೆ ದೆಹಲಿಗೆ ಹೋಗಿ ಬಿಜೆಪಿ ಸೇರ್ಪಡೆ ಆಗಿದ್ದಾರೆ. ನಾನು ಕೂಡಾ ಮಾದ್ಯಮದಲ್ಲಿ ನೋಡಿದೆ. ಅನಿರೀಕ್ಷಿತ ಬೆಳವಣಿಗೆ ನಡೆಯಿತು.
ಜಗದೀಶ್ ಶೆಟ್ಟರ್ ಉಳಿಸಿಕೊಳ್ಳುವ ಪ್ರಯತ್ನ ವಿಚಾರ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಎಂ ಅವರಿಗೆ ಸಂಪೂರ್ಣ ಮಾಹಿತಿ ಇರಬಹುದು. ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಶೆಟ್ಟರ್ ಸಿಎಂಗೆ ತಿಳಿಸಿದ್ದರು. ಸಿಎಂ ಹೇಳಿಕೆಯನ್ನು ನಾನು ಮಾದ್ಯಮದಲ್ಲಿ ನೋಡಿದ್ದೇನೆ.
ಶೆಟ್ಟರ್ ಹೋಗುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಗದೀಶ್ ಶೆಟ್ಟರ್ ಲೋಕಸಭಾ ಚುನಾವಣೆ ಮೇಲು ಯಾವುದೇ ಪರಿಣಾಮ ಬೀರುವುದಿಲ್ಲ. ಶೆಟ್ಟರ್ ಬದಲಿಗೆ ಬಿಜೆಪಿಯಿಂದ ಬರುತ್ತಾರೆ. ನೀವು ಕಾದು ನೋಡುವಂತೆ ಸವದಿ ಹೇಳಿಕೆ.
ಶೆಟ್ಟರ್ ಪಕ್ಷವನ್ನು ಬಿಡುವುದು ನನಗೆ ಅವರು ಹೇಳಿಳ್ಳಾ. ಯಾವುದೇ ಚರ್ಚೆ ಮಾಡ್ಲಿಲ್ಲ. ನಾನು ಮೊದಲು ಕಾಂಗ್ರೆಸ್ ಸೇರಿದ ಮೇಲೆ ಶೆಟ್ಟರ್ ಪಕ್ಷಕ್ಕೆ ಬಂದಿದ್ದು. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ.