ಉ.ಕ ಸುದ್ದಿಜಾಲ ಚಿಕ್ಕೋಡಿ :

ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರಿನಲ್ಲಿ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.

ಮೂರು ಮತಕ್ಷೇತ್ರದಲ್ಲಿ ಬಿಜೆಪಿ ಗೆ ಸೋಲು ಹಿನ್ನೆಲೆ. ಇದನ್ನ ರಾಜ್ಯಾಧ್ಯಕ್ಷರಿಗೆ ಪ್ರಶ್ನೆ ಕೇಳ್ರೀ. ಅವರ ನಾಯಕತ್ವ ಜನರು ಒಪ್ಪಿದ್ದಾರೋ ಇಲ್ಲವೋ ಅವರಿಗೆ ಗೊತ್ತು. ನಿನ್ನೆ ದೆಹಲಿಯಲ್ಲಿ ಹೇಳಿದ್ದ ಎಲ್ಲಾ ಬಾಗಿಲು ಬಂದಾಗಿ, ಒಂದೇ ಬಾಗಿಲು ಇರುತ್ತೆ ಅಂತಾ.

ಎಲ್ಲಾ ಬಾಗಿಲು ಬಂದಾಗಿ, ಬಿಜೆಪಿ ಗೆ ಇಂತಹ ಹೀನಾಯ ಸೋಲು ನಮಗೂ ದುಃಖವಿದೆ. ಅವರ ಒಳ ಒಪ್ಪಂದದಿಂದ ಬಿಜೆಪಿ ಗೆ ಈ ದುಸ್ಥಿತಿ ಬರ್ತಿದೆ. ಹೈಕಮಾಂಡ್ ರಾಜ್ಯಕ್ಕೆ ಉಸ್ತುವಾರಿ ನೇಮಿಸುವಾಗ ಪ್ರಾಮಾಣಿಕರು, ಸಂಸ್ಕಾರ ಇದ್ದವರಿಗೆ ಹಾಕಲಿ.

ಈ ಹಿಂದೆ ಅರುಣಸಿಂಗ್ ಅಂತಾ ಇದ್ದವನು. ಯಡಿಯೂರಪ್ಪ, ವಿಜಯೇಂದ್ರ ಸಂದೇಶಕಾರಕನಾಗಿ ಕೆಲಸ ಮಾಡಿದ ಪರಿಣಾಮ. ಈ ಫಲಿತಾಂಶ ಕರ್ನಾಟಕದಲ್ಲಿ ವಿಜಯೇಂದ್ರ ಮಾಡಿದನ್ನ ತಿರಸ್ಕಾರ ಮಾಡಿದ್ದಾರೆ.

ಪಕ್ಷದ ಹೈಕಮಾಂಡ್ ಪೂಜ್ಯ ತಂದೆ, ಮಗನ ವ್ಯಾಮೋಹ ಬಿಡಬೇಕು ಅಂತಾ ವಿನಂತಿ ಮಾಡ್ತಿನಿ. ವಕ್ಫ ಬೋರ್ಡ್ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲವಾ ಪ್ರಶ್ನೆಗೆ. ವಕ್ಫ್ ಬೋರ್ಡ್ ಇವಾಗ ಆರಂಭವಾಗಿದೆ, ಇನ್ನೂ ಜನರಿಗೆ ಗೊತ್ತಗಬೇಕಿದೆ.

ಅದೇ ಮಹಾರಾಷ್ಟ್ರದ ವಕ್ಫ್ ಬೋರ್ಡ ವಿಚಾರವಾಗಿಯೇ ಚುನಾವಣೆ ಮಾಡಿದ್ರು. ಉದ್ಭವ ಠಾಕ್ರೆ ಔರಂಗಜೇಬ್ ಸಮಾಧಿಗೆ ಹೋಗಿ ನಮಸ್ಕಾರ ಮಾಡಿದ್ರು. ಉದ್ಭವ ಠಾಕ್ರೆ ಮಹಾರಾಷ್ಟ್ರ ಜನರು ಮುಳುಗಿಸಿದ್ರು.

ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. .ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ ಎಂದು ಯತ್ನಾಳ ವಾಗ್ದಾಳಿ.