ಉ.ಕ ಸುದ್ದಿಜಾಲ ಧಾರವಾಡ :
ಸಚಿವ ಸಂತೋಷ ಲಾಡ್ ಹಾಗೂ ರೈತನ ನಡುವೆ ಮಾತಿನ ಚಕಮಕಿ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರೆ ಗ್ರಾಮದ ಬಳಿ ಮಾತಿನ ಚಕಮಕಿ ರೈತ ಮುಖಂಡ ರವಿರಾಜ್ ಕಂಬಳಿ ಜೊತೆ ವಾಗ್ವಾದ.
Vidio – ಸಚಿವ ಸಂತೋಷ ಲಾಡ್ ಹಾಗೂ ರೈತನ ನಡುವೆ ಮಾತಿನ ಚಕಮಕಿ ವಿಡಿಯೋ
ತಾಳ್ಮೆ ಕಳೆದುಕೊಂಡ ಸಚಿವ ಸಂತೋಷ ಲಾಡ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿರಾಜ್ ರೈತರ ಸಾಲ ಮನ್ನಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕಿಂತ ಮೊದಲು ಸೊಸೈಟಿ ಜಮೀನು ರೈತರಿಗೆ ಕೊಡೊ ಬಗ್ಗೆ ವಾಗ್ವಾದ ಅದು ಬರಲ್ಲ ಎಂದು ವಾದ ಮಾಡಿದ ಸಚಿವರು.
ಇದರ ನಂತರ ತೆಲಂಗಾಣಾದಲ್ಲಿ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಎರಡು ಲಕ್ಷ ಸಾಲ ಮನ್ನಾ ಬಗ್ಗೆ ಹೇಳಿದ್ದ ಕಾಂಗ್ರೆಸ್ ಅದು ಮಾಡಿದೆ, ನೀವು ಮಾಡಿ ಎಂದ ರೈತ ಅದಕ್ಕೆ ರಾಜ್ಯದಲ್ಲಿ ಮಾಡಿ ಎಂದು ಬೇಡಿಕೆ
ಈ ಮಾತಿಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಏರು ಧ್ವನಿಯಲ್ಲೇ ಇಬ್ಬರು ವಾಗ್ವಾದಬಕಾಂಗ್ರೆಸ್ ಎಂದ ತಕ್ಷಣ ಕೆರಳಿದ ಸಚಿವರುಬಮಹಾರಾಷ್ಟ್ರದಲ್ಲಿ ಮೂರು ಲಕ್ಷ ಸಾಲಮನ್ನಾ ಬಗ್ಗೆ ಮಾತಾಡಿದ್ದಿರಿ, ಇಲ್ಲಿ ಕೂಡಾ ಮಾಡಿ ಎಂದ ರೈತ. ಮಿಡಿಯಾ ಎದುರು ಕೇಂದ್ರ ಸರ್ಕಾರ ಎಷ್ಟು ಸಾಲ ಮನ್ನಾ ಮಾಡಿದ ಎಂದು ಹೇಳಿ ಎಂದ ಸಚಿವ ಲಾಡ್
ಬಾಯಿ ಬಿಟ್ಟು ಕೇಳಿ ಎಂದ ಲಾಡ್ಬಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲ ಮನ್ನಾ ಆಗಿದೆ’ ರಾಜ್ಯದಲ್ಲಿ 2014 ರ ನಂತರ 165 ಕೋಟಿ ಸಿದ್ದರಾಮಯ್ಯ ಸರ್ಕಾರ ಮನ್ನಾ ಮಾಡಿದೆ.
ಕೊಆಪರೆಟಿವ್ ಸೊಸೈಟಿದು ೫೦ ಸಾವಿರ ವರೆಗೆ ರೈತರ ಸಾಲ ಮನ್ನಾ ಆಗಿದೆ ಎಂದ ಲಾಡ್ ಅದು ಆಗ, ಹಳೆ ಕಥೆ ಎಂದ ರೈತ ಇದಕ್ಕೆ ಮತ್ತೇ ಕೆರಳಿದ ಲಾಡ್ ನೀವು ರಾಜಕೀಯ ಮಾಡೊಬಾರದು ಎಂದ ಲಾಡ್.
ಬಿಜೆಪಿಯ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಬಗ್ಗೆ ಹೇಳಿದ್ರು, ನೀವು ಒದಿಕೊಳ್ರಿ, 2014 ಕ್ಕೆ ಹೇಳಿದ್ರು ಎಂದ ಲಾಡ್; ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಬಿಜೆಪಿ ಒಂದು ರೂಪಾಯಿ ಕೂಡಾ ಮಾಡಿಲ್ಲ ಎಂದ ಲಾಡ್
ನನ್ನ ಕಡೆ ವಿಡಿಯೋ ಇವೆ ಎಂದ ರೈತ ಆಗ ಮತ್ತೇ ವಾಹನಕ್ಕೆ ಹೋಗಿದ್ದ ವಾಪಸ್ ಬಂದು ರೈತರ ಜೊತೆ ಮಾತಾಡಿದ ಲಾಡ ರೈತರ ಸಾಲಮನ್ನಾ ಮಾಡಿ ಎಂದಿದ್ದರು ಸಾಕಾಗಿತ್ತು ಆದರೆ ನೀವು ಕಾಂಗ್ರೆಸ್ ಯಾಕೆ ಅಂದ್ರಿ ಎಂದ ಲಾಡ್.
11 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಇದೆ 19 ರಾಜ್ಯದಲ್ಲಿ ಬಿಜೆಪಿ ಇದೆ. ಯಾರ ಸಾಲಮನ್ನಾ ಮಾಡಿಲ್ಲ, ಅದು ಮನ್ನಾ ಮಾಡಿದ್ದರೆ ಕಾಂಗ್ರೆಸ್ ಸರ್ಕಾರ ಎಂದ ಸಚಿವ ಸಂತೋಷ ಲಾಡ್.