ಉ.ಕ ಸುದ್ದಿಜಾಲ ವಿಜಯಪುರ :

ತುಳಜಾಪುರದಿಂದ ದೇವಿ ದೀಪ ತರುತ್ತಿದ್ದ ಯುವಕ ಸಾವು, ಕಾಲ್ನಡಿಗೆಯಿಂದ ಸಾಗುತ್ತಿದ್ದ ಮಾರ್ಗ ಮಧ್ಯೆ ವಾಹನ ಹರಿದು ಸಾವು. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಮೂಲದ ವ್ಯಕ್ತಿ ಸಾವು.

ಉಮದಿ ಮೂಲದ ಕರನ್ ಕೆಂಗಾರ್ (25) ಸಾವನಪ್ಪಿರುವ ಯುವಕ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಸರ್ವಿಸ್‌ ರಸ್ತೆಯಲ್ಲಿ ಘಟನೆ. ನವರಾತ್ರಿ ಪ್ರಯುಕ್ತ ತುಳಜಾಪುರದಿಂದ ಅಂಬಾಭವಾನಿ ದೇಗುಲದಿಂದ ದೀಪದ ಪಂಜು ತರುತ್ತಿದ್ದ ಯುವಕರ ಗುಂಪು. ಈ ವೇಳೆ ದೀಪವನ್ನ ಮತ್ತೊಬ್ಬ ಯುವಕನಿಗೆ ಹಸ್ತಾಂತರಿಸಿ ವಾಹನ ಹತ್ತುವ ವೇಳೆ ಕೆಳಗೆ ಬಿದ್ದ ಕರನ್. ಹಿಂಬದಿಯಿಂದ ಬಂದು ಯುವಕನ ಮೇಲೆ ಹರಿದ ವಾಹನ. ಸ್ಥಳದಲ್ಲೇ ಯುವಕ ಕರನ್ ಸಾವು.