ಉ.ಕ ಸುದ್ದಿಜಾಲ ಅಥಣಿ :

ಬಡ ಕುಟುಂಬದಲ್ಲಿ ಹುಟ್ಟಿ ಬಡವರ ನೋವಿಗೆ ಸ್ಪಂಧಿಸಲು ಸದಾ ಸಿದ್ದ, ಕಳೆದ ಹತ್ತು ವರ್ಷಗಳಿಂದ ಜನ ಸೇವೆಯಲ್ಲಿ ಭಾಗಿಯಾಗಿ ಜನ ಸೇವೆಯೇ ಜನಾರ್ಧನ ಸೇವೆ ಅಂತಾ ತಿಳಿದು ಕಾರ್ಯಗಳನ್ನ ಮಾಡುತ್ತಿರುವ ಜನನಾಯಕ ಅಥಣಿ ಜನರ ಕಣ್ಮಣಿ ಧರೆಪ್ಪ ಠಕ್ಕಣ್ಣವರ ಸಾಮಾಜಿಕ ಕಾರ್ಯಕ್ಕೆ ಮನಸೊತ ಅಥಣಿ ಜನತೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಜ್ಯದ ಗಡಿ ಭಾಗದ ಅಥಣಿ ತಾಲೂಕು ಸರ್ವಧರ್ಮಗಳ ಸಮನ್ವಯ ಸಾಧಿಸಿ ಇಸ್ಲಾಂ ಧರ್ಮದ ಮೊಗಲರು ಹಿಂದೂ ದೇವಾಲಯಗಳ ನಿರ್ಮಿಸಿ ಸೌಹಾರ್ದತೆಯ ಮೆರೆದಂತಹ ಐತಿಹಾಸಿಕವಾದ ಪುಣ್ಯ ಸ್ಥಳ ಇದಾಗಿದೆ. ಇಲ್ಲಿನ ಜನರ ಜೀವನದಿಯಾಗಿ ಕೃಷ್ಣಾ ನದಿಯು ಹರೆದಿದ್ದು ರೈತರ ಜೀವನಾಡಿಯಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಬ್ಬು, ದ್ರಾಕ್ಷಿ ಬೆಳೆಯುತ್ತಿದ್ದು ಸಕ್ಕರೆಯ ಖನಜವಾಗಿದೆ. ಇತಂಹ ಪವಿತ್ರ ನಾಡಿನ ಪುಣ್ಯಕ್ಷೇತ್ರದಲ್ಲಿ ಶ್ರೀ ಧರೇಪ್ಪ ಠಕ್ಕಣ್ಣವರ ಅವರು ಇಲ್ಲಿ ಜನಿಸಿ ಇಲ್ಲಿನ ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ.

ಧರೇಪ್ಪ ಎಸ್ ಠಕ್ಕಣ್ಣವರ ಅವರ ತಂದೆ ಶಿವಪ್ಪ ತಾಯಿ ಚಂದ್ರವ್ವ ಅವರ ನೆಚ್ಚಿನ ಹಿರಿಯ ಮಗನಾಗಿ ಮಹಾನವಮಿಯ ದ್ವೀಪ ಹಚುವ ಪವಿತ್ರ ದಿನವಾದ ಸೆಪ್ಟೆಂಬರ್ 26, 1984 ರಂದು ಅಥಣಿಯಲ್ಲಿ ಜನಿಸಿದರು. ಇವರ ತಂದೆ-ತಾಯಿಗಳಿಗೆ ಮಕ್ಕಳನ್ನು ಚನ್ನಾಗಿ ಓದಿಸಬೇಕು, ಬೆಳೆಸಿ ದೊಡ್ಡವರನ್ನು ಮಾಡಬೇಕೆಂದು ಕೃಷಿ ಕಾಯಕ ನಡೆಸುತ್ತಾ ಮಕ್ಕಳನ್ನು ಸಾಕಿ ಸಲುಹಿದರು. ಬಡತನದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರಿಂದ ಹಿರಿಯ ಮಗನಿಗೆ ಮನೆಯ ಜವಾಬ್ದಾರಿಗಳು ಹೆಚ್ಚಿದ್ದರಿಂದ ಧರೇಪ್ಪಣ್ಣನವರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ಶಿಕ್ಷಣ ನಡೆಯಿತು. ವಿದ್ಯಾಭ್ಯಾಸ ಮಾಡುತ್ತಲೇ ತಂದೆ-ತಾಯಿಗಳೊಂದಿಗೆ ಕೃಷಿ ಕಾಯಕ ಮಾಡುತ್ತಾ ಕುಟುಂಬಕ್ಕೆ ನೆರೆವಾದರು. ಕಷ್ಟಗಳು ಬಿಸಿಲು ಕತ್ತಲು ಇದ್ದಹಾಗೆ ಬದಲಾಗಲೇ ಬೇಕು ಎಂಬ ಭರವಸೆಯಿಂದ ಅವರ ಕೃಷಿ ಕಾಯಕದಲ್ಲಿ ತೊಡಗಿ ಅದರಲ್ಲಿ ಯಶಸ್ಸು ಕಂಡಿರುವುದು ಹೆಮ್ಮೆಯ ಸಂಗತಿ.

ಒಬ್ಬ ಟ್ರ್ಯಾಕ್ಟರ ಚಾಲಕನಾಗಿ ಕೆಲಸ ಆರಂಭ ಮಾಡಿದ ಧರೆಪ್ಪ ಇಂದು ನಾಲ್ಕು ಜನರಿಗೆ ಸಹಾಯ ಮಾಡುವಷ್ಟು ಬೆಳೆದಿದ್ದಾರೆ ಸತತ ಪರಿಶ್ರಮ, ದಾನ, ಧಾರ್ಮಿಕ‌ ಕಾರ್ಯ ಇವೆಲ್ಲವುಗಳನ್ನ ತಮ್ಮ ಜೀವನದಲ್ಲಿ ರೂಡಿಸಿಕೊಂಡು ಇಂದು ದೊಡ್ಡ ಗುತ್ತಿಗೆದಾರನಾಗಿ‌ ಬೆಳೆದು ನಿಂತು ನೂರಾರು ಯುವಕರಿಗೆ ಉದ್ಯೋಗ ನೀಡಿ ಅಥಣಿ ಜನತೆಗೆ ಪ್ರೀತಿಯ ಮಗನಾಗಿದ್ದಾನೆ ಧರೆಪ್ಪ ಠಕ್ಕಣವರ.

ಇವರು 2014 ರಲ್ಲಿ ಗುತ್ತಿಗೆದಾರನಾಗಿ ಕೆಲಸ ಪ್ರಾರಂಭ ಮಾಡುತ್ತಾರೆ. ಅದಕ್ಕೆ ಅಗತ್ಯವಿರುವ ವಾಹನಗಳು, ಮಶಿನ್, ಟಿಪ್ಪರ ಸೇರಿದಂತೆ ಎಲ್ಲ ವ್ಯವಸ್ಥೆಗಳ ಮಾಡಿಕೊಂಡು ಕೆಲಸ ಪ್ರಾರಂಭ ಮಾಡಿ. ಇದರಿಂದ ಅನೇಕರಿಗೆ ಉದ್ಯೋಗ ನೀಡಿದ ಗರಿಮೆ ಇವರದಾಗಿದ್ದು ಇಂದು ಹಲವಾರು ಯುವಕರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಮಾರ್ಗದರ್ಶನ ನೀಡಿದ್ದಾರೆ. ಗುರು ಹಿರಿಯರ ಆಶೀರ್ವಾದದ ಫಲವಾಗಿ ಉದ್ಯೋಗದಲ್ಲಿ ಯಶಸ್ಸು ಕಾಣುತ್ತಾ ಗುತ್ತಿಗೆದಾರನಾಗಿ ಹಲವಾರು ಉದ್ಯಮಗಳನ್ನು ಆರಂಭಿಸಿದರು.

ಬೆಳಗಾವಿ‌ ಜಿಲ್ಲೆಯಲ್ಲಿ ಅತಿ ದೊಡ್ಡ ತಾಲೂಕೆಂದರೆ ಅಥಣಿ ತಾಲೂಕು ಇಲ್ಲಿ ಅತಿವೃಷ್ಟಿ ಎಷ್ಟಿರುತ್ತೆ ಅಷ್ಟೇ ಅನಾವೃಷ್ಟಿ ಕೂಡಾ ಇರುತ್ತೆ ಹೀಗಾಗಿ ಅಥಣಿ ಜನರು ತುಂಬಾ ತೊಂದರೆಯಲ್ಲಿದ್ದಾಗ ಭರದ ಭಗಿರಥ ಎಂದೇ ಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ ಧರೆಪ್ಪ‌ ಠಕ್ಕಣವರ 2019 ರಲ್ಲಿ ಅಥಣಿ ತಾಲೂಕಿನಲ್ಲಿ ಉಂಟಾದ ಭೀಕರ ಬರಗಾಲದ ಸಮಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲದೆ ಹಾಹಾಕಾರ ಉಂಟಾದಾಗ ನಿರಂತರವಾಗಿ ಟ್ಯಾಂಕರ್ ಮೂಲಕ ಪ್ರತಿದಿನ ಅಥಣಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮದ ಜನರ ಮನೆ-ಮನೆಗೆ ಕುಡಿಯುವ ನೀರು ಪೂರೈಸಿ ಜನರ ಕಷ್ಟದಲ್ಲಿ ಬಾಗಿಯಾಗಿ ಅವರ ದಾಹ ತೀರಿಸಿ ಅವರ ಕೃಪೆಗೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸುರಿಯುವ ಭಾರಿ ಮಳೆಯಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಆಗುತ್ತದೆ ಆಗ ಅಲ್ಲಿನ ಕೊಯ್ನಾ ಡ್ಯಾಂ ನಿಂದ ಹೆಚ್ಚಿನ ಪ್ರಮಾಣದ ನೀರು ಬೀಡುವುದರಿಂದ ಅಥಣಿ ಕ್ಷೇತ್ರದ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ನೀರು ಬಂದು ಪ್ರವಾಹ ಉಂಟಾಗಿತ್ತದೆ. ನದಿ ತೀರದ ಜನರು ಪ್ರತಿವರ್ಷ ಅಪಾಯದಂಚಿನಲ್ಲಿ ಬಂದು ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಭೀಕರ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳು ನೆರೆ ಸಂತ್ರಸ್ತರಾಗುತ್ತಿದ್ದಾರೆ ಇತಂಹ ಸಂದಿಗ್ದ ಪರಿಸ್ಥಿತಿಯಲ್ಲಿ ಅವರ ಬಳಿಗೆ ತೆರಳಿ ಆಹಾರ ವಿತರಿಸಿ ನೆರೆ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಿದ್ದಾರೆ. ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಔಷಧ ಕಿಟ್‌ಗಳನ್ನು ವಿತರಿಸಿದರು. ಕೃಷ್ಣಾ ನದಿ ಪ್ರವಾಹದಿಂದ ಹುಲಗಬಾಳಿ ಗ್ರಾಮದಲ್ಲಿ ಸಿಲುಕಿದ್ದ ಜನರನ್ನು ರಕ್ಷಣಾ ಪಡೆಯೊಂದಿಗೆ ತೆರಳಿ ಧೈರ್ಯ ತುಂಬಿ ರಕ್ಷಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ಅಲ್ಲಿನ ನೆರೆ ಸಂತ್ರಸ್ಥರಿಗೆ ಅನ್ನಸಂತರ್ಪಣೆ ಮಾಡಿ ಅವರ ಸಂಕಷ್ಟದಲ್ಲಿ ಭಾಗಿಯಾಗುತ್ತಿದ್ದಾರೆ.

ಕೊರೂನಾ ಎರಡನೇ ಅಲೆ ಸಂದರ್ಭದಲ್ಲಿ ವಿವಿಧ ಇಲಾಖೆಯ ವಾರಿಯರ್‌ಗಳಿಗೆ ದಿನನಿತ್ಯ ಸಾವಿರಾರು ಊಟದ ಪೊಟ್ಟಣ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೋವಿಡ್ ಗೆ ಚಿಕಿತ್ಸೆ ನೀಡುವ ವೈದ್ಯರು, ಪೊಲೀಸ ಇಲಾಖೆಯ ಸಿಬ್ಬಂದಿ, ಹೋಮಗಾರ್ಡ, ಕೃಷಿ ಮಾರುಕಟ್ಟೆಯ ಹಮಾಲರು, ಪೌರಕಾರ್ಮಿಕರಿಗೆ, ಪುರಸಭೆ ಸಿಬ್ಬಂದಿಗೆ, ಬೀದಿ ಬದಿ ಕುಳಿತು ಹೂವು ಹಣ್ಣು, ಕಾಯಿಪಲ್ಲೆ ವ್ಯಾಪಾರ ಮಾಡುವವರಿಗೆ, ಅಲೆಮಾರಿ ಜನರಿಗೆ, ಬುದ್ಧಿಮಾಂಧ್ಯರಿಗೆ, ನಿರ್ಗತಿಕರು, ಅನಾಥ, ಕಿವುಡ ಮುಖ ಮಕ್ಕಳಿಗೆ ಸೇರಿದಂತೆ ಅನೇಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ.

2008 ರಲ್ಲಿ ವಿವಿಧ ಉದ್ಯಮ, ಕೃಷಿ, ಗುತ್ತಿಗೆದಾರನಾಗಿ ವೃತ್ತಿಯ ಆರಂಭಿಸಿ ಆರ್ಥಿಕ ಸಬಲತೆಯ ಕಂಡುಕೊಂಡು ಸಮಾಜಸೇವೆಯ ಇನ್ನೊಂದು ಮುಖವಾದ ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳುವುದು ಸಾಮಾಜಿಕ ಸೇವೆ ಸಲ್ಲಿಸುವ ಕಾರ್ಯ ಆರಂಭವಾಯಿತು. ಈ ಸಮಯದಲ್ಲಿ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಶ್ರೀ ಕಿರಣಗೌಡ ಪಾಟೀಲ ಅವರ ಪ್ರಚಾರ ಸಭೆಗಳಲ್ಲಿ ತೊಡಗುವ ಮೂಲಕ ರಾಜಕೀಯ ಮುಂದಾಳತ್ವ ವಹಿಸಿಕೊಂಡು ಸಾರ್ವಜನಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಉದ್ಯೋಗದಲ್ಲಿ ಸಹೋದರನ ಸಹಕಾರದಿಂದ ಹಿಡಿದ ಪ್ರತಿಯೊಂದು ಕೆಲಸಗಳು ಕಲ್ಪವೃಕ್ಷದಂತೆ ಬೆಳೆಯತೊಡಗಿದವು. ವೃತ್ತಿಯ ಜೊತೆಗೆ ರಾಜಕೀಯ ಕಾರ್ಯಕ್ರಮಗಳಲ್ಲಿ, ಚುನಾವಣಾ ಪ್ರಚಾರಗಳಲ್ಲಿ ಸಕ್ರೀಯವಾಗಿ ಭಾಗಿಯಾಗಲು ಪ್ರಾರಂಭ ಮಾಡಿದರು. ಕಷ್ಟದಲ್ಲಿ ಇದ್ದವರಿಗೆ ಅಥಣಿ ಜನತೆಗೆ ದೇವರಾದ ಧರೆಪ್ಪ ಠಕ್ಕಣವರ ಜನಪ್ರತಿನಿಧಿಯಾಗ ಬೇಕೆಂದು ಕ್ಷೇತ್ರದ ಜನತೆ ಆಸೆ ಪಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದನಿದ್ದೆನೆ ಮತ್ತಷ್ಟು ಜನ ಸೇವೆ ಮಾಡಲು ನನಗೂ‌ ಅನಕೂಲವಾಗುತ್ತೆ ಎನ್ನುತ್ತಾರೆ ಧರೆಪ್ಪ ಠಕ್ಕಣವರ.