ಉ.ಕ ಸುದ್ದಿಜಾಲ ಬೆಳಗಾವಿ :

ಪಂಚಮಸಾಲಿ ಹೋರಾಟದ ಕ್ರೆಡಿಟ್ ಒಬ್ಬರದೇ ಅಲ್ಲ ಸಾಮಾನ್ಯ ಕಾರ್ಯಕರ್ತ ಸೇರಿ ಎಲ್ಲರಿಗೂ ಸಲ್ಲುತ್ತದೆ. ಯಾರಿಗೆ ಹೆಚ್ಚು ಯಾರಿಗೆ ಕಡಿಮೆ ಅದನ್ನು ಜನ ನಿರ್ಣಯ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸವರಾಜ ಪಾಟೀಲ ಯತ್ನಾಳ ಹೇಳಿದರು.

ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ. ಮಲೆ ಮಹದೇಶ್ವರ ಬೆಟ್ಟದಿಂದ ಬಸವ ಕಲ್ಯಾಣ ವರೆಗೆ 750 ಕಿಮೀ ಪಾದಯಾತ್ರೆ ಮಾಡಿದ್ದಾರೆ. ರಾಮಾಯಣ ಮಹಾಭಾರತ ಕಾಲದಿಂದಲೂ ವರ್ಗ ಇರೋದೇ. ಪಂಚ ಪಾಂಡವರಲ್ಲಿ ಕೌರವ, ರಾಮಾಯಣದಲ್ಲಿ ರಾವಣ ಹಾಗೆ ಇರೋದೇ. ಒಂದು ಕಡೆ ಧರ್ಮ ಇದ್ರೆ ಇನ್ನೊಂದು ಕಡೆ ಅಧರ್ಮ ಇರುತ್ತೆ ನಾವೆಲ್ಲ ಧರ್ಮದವರು.

ಕೇವಲ ನಮ್ಮ ಸಮುದಾಯಕ್ಕೆ ಅಷ್ಟೇ ಅಲ್ಲ, ಎಲ್ಲ ಸಮುದಾಯಕ್ಕೆ ಮೀಸಲಾತಿ ಕೇಳಿದ್ದೇವೆ. ನಮ್ಮ ಹೋರಾಟ ಒಂದಕ್ಕೆ ಮೀಸಲು ಇಲ್ಲ. ಸ್ವಾಮೀಜಿ ನೇತೃತ್ವದಲ್ಲಿ ಇದೆ 22ಕ್ಕೆ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ. 25 ಲಕ್ಷ ಜನರಿಗೆ ಊಟದ ಸೇರಿದಂತೆ ಇನ್ನುಳಿದ ವ್ಯವಸ್ಥೆ ನಮ್ಮ ಸಮಾಜದ ಎಲ್ಲರಿಂದ ಮಾಡಿದ್ದೇವೆ.

ಪಂಚಮಸಾಲಿ ಮೀಸಲಾತಿ ಮುಂದಿನ ನಡೆ ಏನು, ಯತ್ನಾಳ ಸಾಹೇಬರು ಹೇಳಿದ್ದೇನು?

ಸಿಎಂ ಭರವಸೆ ಕೊಟ್ಟಿದ್ದಾರೆ ಮತ್ತೇಕೆ ಪ್ರತಿಭಟನೆ ಎಂಬ ಪ್ರಶ್ನೆ. ಡಿ.19 ರಂದು ಮೀಸಲಾತಿ ಘೋಷಣೆ ಆದ್ರೆ 22ಕ್ಕೆ ಸನ್ಮಾನ ಮಾಡುತ್ತೇವೆ. ಕಾನೂನು ತೊಡಕು ಆಗದಂತೆ ಬೊಮ್ಮಾಯಿ ವ್ಯವಸ್ಥೆ ಮಾಡಿದ್ದಾರೆ. ವಚನಾನಂದ ಸ್ವಾಮೀಜಿಗೆ ಆಹ್ವಾನ ಕೊಡುತ್ತೀರಿ. ಇದು ಸಮಾಜ ಇದೆ ಬೇಕಾದ್ರೆ ಬಂದು ಕೂಡಲಿ ವೇದಿಕೆ ಮೇಲೆ ಏಕೆ ಅವಕಾಶ ಕೊಡಬೇಕು.

ವಚನಾನಂದ ಶ್ರೀ ಸರ್ಕಾರಕ್ಕೆ ಡೆಡ್ ಲೈನ್ ಕೊಡುವ ವಿಚಾರ. 22 ಕ್ಕೆ ಯಾರದು ಡೆಡ್ ಲೈನ್ ಮುಗಿಯೋತ್ತೋ ಯಾರಿಗೆ ಗೊತ್ತಿದೆ. ಅವರದೇ ಡೆಡ್ ಲೈನ್ ಮುಗಿತ ಅಂದ್ರೇ ಎಂಡಲೈನ್ ಬರೋದಿದೆ. ಕಾಂಗ್ರೇಸ್ ನವರು ಡಿಕೆಶಿಗೆ, ಸಿದ್ಧರಾಮಯ್ಯಗೆ ಕನ್ವೆನ್ಸ್ ಮಾಡಿ ಬಿಟ್ಟಿದ್ದಾರೆ. ಶಿವಶಂಕರ್ ಕುಮಾರಸ್ವಾಮಿಗೆ ಕನ್ವೆನ್ಸ್ ಮಾಡಿದ್ದಾರೆ.