ಉ.ಕ ಸುದ್ದಿಜಾಲ ಕಾಗವಾಡ :

ಗೋ ಹತ್ಯೆ ನಿಷೇಧ ಮಾಡತ್ತೀವಿಬಾಂತಾ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ, ಹಸುಗಳ ಚಿಕಿತ್ಸೆಗೆ ವೈದ್ಯರಿಲ್ಲದೆ ಪರದಾಡುತ್ತಿದ್ದರೆ. ಸರ್ಕಾರದ ನಿರ್ಲಕ್ಷ್ಯತನದಿಂದ ಪಶು ಆಸ್ಪತ್ರೆಗಳಿಗೆ ಸರ್ಕಾರಿ ವೈದ್ಯರಿಲ್ಲದೆ ಚರ್ಮಗಂಟು ರೋಗಕ್ಕೆ ಚಿಕಿತ್ಸೆ ಇಲ್ಲದೆ ಗೋವುಗಳ ಮಾರಣ ಹೋಮಗಳಾಗುತ್ತಿವೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿರುವ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಜಾನುವಾರುಗಳಿಗೆ ಚಿಕಿತ್ಸೆ ನೀಡುವುದು ಸಹಜ. ಆದರೆ, ಇಲ್ಲಿಯ ಪಶು ಇಲಾಖೆಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಬಂದೋದಗಿದೆ.

ಪರಿನಾಮ ಶೇ.80 ರಷ್ಟು ಹುದ್ದೆಗಳಿಗೆ ವೈದ್ಯರು ಹಾಗೂ ಶಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದ್ದವರು ತಮ್ಮ ಸ್ವಂತ ಹಿತಾಶಕ್ತಿಗೋಸ್ಕರ ಬೇರೆಡೆಗೆ ಡೆಪ್ಟೆಶನ್ ಮೇಲೆ ಹೋಗಿರುವದರಿಂದ ಪಶು ಆಸ್ಪತ್ರೆಗಳು ಈಗ ರೋಗ ಪೀಡಿತವಾಗಿವೆ.

ಹೌದು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಎಂಟು ಪಶು ಆಸ್ಪತ್ರೆಗಳಿವೆ. ಅದರಲ್ಲಿ ಕೇವಲ ಒಂದೇ ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು ಏಳು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಆಸ್ಪತ್ರೆಗಳು ಖಾಲಿ ಇವೆ. ಆಶ್ವರ್ಯವೆಂದರೆ ಶಿರಗುಪ್ಪಿ ಹಾಗೂ ಶೇಡಬಾಳ ಗ್ರಾಮಗಳಲ್ಲಿ ವೈದ್ಯರು, ಪರಿವೀಕ್ಷಕರು ಸೇರಿದಂತೆ ಯಾವೊಬ್ಬ ಶಿಬ್ಬಂದಿಯೂ ಇಲ್ಲದೆ ಬಳಲುತ್ತಿರುವುದರಿಂದ ತಾಲೂಕಿನ ರೈತರಿಗೆ, ಕೃಷಿ ಕಾರ್ಮಿಕರಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಸರ್ಕಾರ ಮತ್ತು ಇಲಾಖೆ ಸಂಪೂರ್ಣ ವಿಫಲವಾಗಿವೆ.

ಕಾಗವಾಡ ತಾಲೂಕು ಕೃಷ್ಣಾ ನದಿಯ ದಡದಲ್ಲಿರುವುದರಿಂದ ಈ ಭಾಗದ ಪ್ರಮುಖ ಉದ್ಯೋಗ ಕೃಷಿ. ಹಾಗೂ ಹೈನುಗಾರಿಕೆಗೆ ಹೆಚ್ಚಿನ ಆಧ್ಯತೆ ಇದೆ. ಹೀಗಾಗಿ ರೈತರ ಜೀವನಾಡಿಗಳಾದ ಎತ್ತು, ಎಮ್ಮೆ, ಕುರಿ, ಆಕಳು, ಆಡು ಹೀಗೆ ವಿವಿಧ ಬಗೆಯ ಪ್ರಾಣಿಗಳನ್ನು ಸಾಕುತ್ತಾರೆ.

ಅವುಗಳಿಗೆ ಸಾಮಾನ್ಯವಾಗಿ ಗಂಟಲು ಬೇನೆ, ಕಾಲು, ಬೇನೆ. ಹಾಗೂ ಕರುಳು ಬೇನೆ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾಗುವ ಜಾನುವಾರು ಮತ್ತು ಕುರಿ ಮೇಕೆಗಳ ಚಿಕಿತ್ಸೆಗಾಗಿ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಕಂಡು ಬಂದಿದ್ದ ಚರ್ಮಗಂಟು ರೋಗ ಜಾನುವಾರುಗಳಿಗೆ ಹೆಚ್ಚು ಮಾರಣಾಂಕಿತವಾಗಿರಲಿಲ್ಲ. ಸೋಂಕು ಚರ್ಮಕಷ್ಟೇ ಸೀಮಿತವಾಗಿರುತ್ತಿತ್ತು. ಆದರೆ, ಈ ಬಾರಿ ಜಾನುವಾರುಗಳ ಶ್ವಾಸಕೋಶ ಮುಂತಾದ ಒಳ ಅಂಗಗಳಿಗೂ ತೀವ್ರ ಹಾಣಿಯಾಗುತ್ತಿದೆ.

ರೋಗದಿಂದ ಚೇತರಿಸಿಕೊಂಡ ಒಂದೆರಡು ವಾರದ ನಂತರ ಜಾನುವಾರುಗಳು ಸಾವನ್ನಪ್ಪುತ್ತಿರುವ ಘಟನೆಗಳೂ ನಡೆಯುತ್ತಿವೆ. ಚರ್ಮಗಂಟು ರೋಗ (ಲಿಂಪಿಸ್ಕಿನ್‌ಡಿಸೀಜ್)ಗೆ ಕಾರಣವಾಗುವ ಕ್ಯಾಪ್ರಿಫಾಕ್ಸ್ ವೈರಾಣು ರೂಪಾಂತರಿಯಾಗಿರುವುದೇ ರೋಗ ಉಲ್ಬಣಿಸಲು ಕಾರಣವಾಗಿದೆ. ತಾಲೂಕಿನ ಪಶು ವೈದ್ಯಾಧಿಕಾರಿಗಳು, ಶಿಬ್ಬಂದಿಗಳ ಕೊರತೆಯ ನಡುವೆಯೂ ಇದ್ದ ಶಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಕಾಗವಾಡ ತಾಲೂಕಿನಲ್ಲಿ ಎಂಟು ಪಶು ಆಸ್ಪತ್ರೆಗಳಿವೆ. ಅದರಲ್ಲಿ ಈಗ ಸದ್ಯ ಐನಾಪುರ ಹೊರತುಪಡಿಸಿದರೆ ಎಲ್ಲ ಆಸ್ಪತ್ರೆಗಳಲ್ಲಿ ಪಶು ವೈದ್ಯರಿಲ್ಲ. ತಾಲೂಕಾ ಘೋಷಣೆಯಾಗಿ ನಾಲ್ಕು ವರ್ಷವಾದರೂ ಅಧಿಕಾರಿಗಳ ಇಚ್ಚಾಶಕ್ತಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷತನದಿಂದ ತಾಲೂಕು ಬಡವಾಗಿದೆ. ಕಾಗವಾಡ ಪಟ್ಟಣ ತಾಲೂಕಾ ಕೇಂದ್ರವಿದೆ.

ಇಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೆಶಕರ ಪೂರ್ಣ ಪ್ರಮಾಣದ ಹುದ್ದೆ ಹೊಂದಿದ ವೈದ್ಯರಿದ್ದರು. ಇವರಿಗೆ ಶೇಡಬಾಳ ಪಟ್ಟಣದ ಆಸ್ಪತ್ರೆಯ ಇನ್ ಚಾರ್ಜ ಇದೆ. ಎರಡನ್ನು ನಿಭಾಯಿಸಿಕೊಂಡು ರೈತರಿಗೆ ಸೇವೆ ನೀಡುವುದನ್ನು ಬಿಟ್ಟು ಇವರು ಬೇರೆಡೆಗೆ ಇನ್ ಚಾರ್ಜ ಇಓ ಆಗಿ ಕಾರ್ಯ ನಿರ್ವಹಿಸುತ್ತಿರುವದರಿಂದ ಈ ಭಾಗದ ರೈತರ ಜಾನುವಾರುಗಳಿಗೆ ಕಳೆದ ಒಂದು ವರ್ಷದಿಂದ ವೈದ್ಯಕೀಯ ಸೇವೆ ಸಿಗುತ್ತಿಲ್ಲ.

ಕಾಗವಾಡ ತಾಲೂಕಿನಲ್ಲಿ ಕಾಗವಾಡ, ಶಿರಗುಪ್ಪಿ, ಜುಗೂಳ, ಉಗಾರ, ಬಿಕೆ. ಶೇಡಬಾಳ, ಐನಾಪೂರ ಮೋಳೆ ಹಾಗೂ ಮಂಗಸೂಳಿ ಹೀಗೆ ಎಂಟು ಪಶು ಆಸ್ಪತ್ರೆಗಳಿವೆ. ಇದರಲ್ಲಿ ಐನಾಪುರದಲ್ಲಿ ಮಾತ್ರ ವೈದ್ಯರಿದ್ದಾರೆ. ಬಾಕಿ ಉಳಿದ ಆರು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಆಶ್ಚರ್ಯವೆಂದರೆ ಶಿರಗುಪ್ಪಿ ಹಾಗೂ ಶೇಡಬಾಳ ಪಟ್ಟಣಗಳಲ್ಲಿ ವೈದ್ಯರು, ಸೇರಿದಂತೆ ಯಾವೊಬ್ಬ ಸಿಬ್ಬಂದಿಯೂ ಇಲ್ಲ.

ಎಲ್ಲವು ಖಾಲಿ ಇದ್ದರೂ ಸಹ ಜನಪ್ರತಿನಿಧಿಗಳಾಗಲಿ, ಹಿರಿಯ ಅಧಿಕಾರಿಗಳಾಗಲಿ ಚಕಾರ ಎತ್ತುತ್ತಿಲ್ಲ. ಇದರಿಂದ ಬಡ ರೈತರು ಖಾಸಗಿ ವೈದ್ಯರ ಬಳಿ ಸಾವಿರಾರು ರೂ ವೆಚ್ಚಮಾಡಿ ನೆರೆಯ ಮಹಾರಾಷ್ಟ್ರದ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲಿಯ ರೈತರು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಐನಾಪೂರ ಪ.ಪಂ ಸದಸ್ಯ ಅರುಣ ಗಾಣಿಗೇರ ಮಾತನಾಡಿ ಕಾಗವಾಡ ತಾಲೂಕಿನಲ್ಲಿ ಎಂಟು ಪಶು ಆಸ್ಪತ್ರೆಗಳಿವೆ ಆದರೆ ಕೇವಲ ಒಬ್ಬರೇ ವೈದ್ಯರಿದ್ದಾರೆ. ಇದರಿಂದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಜಾನುವಾರುಗಳು ಸಾವನ್ನುಪ್ಪಿತ್ತಿವೆ ಎಂದು ಸ್ಥಳಿಯ ಶಾಸಕರು ಮತ್ತು ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಕೃಷಿ ಕುಟುಂಬಗಳಿಗೆ ದನ ಕರುಗಳೇ ಆಸರೆಯಾಗಿವೆ. ಮೊದಲೇ ಸಂಕಷ್ಡದಲ್ಲಿರುವ ರೈತಾಪಿ ಕುಟುಂಬಗಳು ಈಗ ಆಸರೆಯಾಗಿದ್ದ ದನಕರುಗಳ ಸಾವಿನಿಂದ ಕಂಗಾಲಾಗುವಂತಾಗಿದೆ, ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರದ ಜೊತೆಗೆ ರೋಗದಿಂದ ಬಳಲುತ್ತಿರುವ ದನ ಕರುಗಳಿಗೆ ಕೂಡಲೇ ಚಿಕಿತ್ಸೆ ದೊರೆಯುವಂತೆ ಮಾಡಬೇಕು.

ಒಂದು ವೇಳೆ ಸರಕಾರ ಈ ವಿಷಯವನ್ನು ಲಘುವಾಗಿ ಪರಿಗಣಿಸಿದರೆ ತಹಸೀಲ್ದಾರ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.