ಉ.ಕ ಸುದ್ದಿಜಾಲ ವಿಜಯಪುರ :
ಅಣ್ಣ- ತಮ್ಮ ಕಾಲುವೆ ನೀರು ಪಾಲು. ಕಾಲುವೆಯಲ್ಲಿ ನೀರು ಕುಡಿಯಲು ಹೋದ ಅಣ್ಣ. ಅಣ್ಣನನ್ನು ರಕ್ಷಿಸಲು ಹೋಗಿ ತಮ್ಮನು ಕಾಲುವೆಯ ನೀರುಪಾಲು. ಸಹೋದರರಿಬ್ಬರು ಕಾಲುವೆ ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ನಡೆದಿದೆ.
ಹಳ್ಳದ ಗೆಣ್ಣೂರು ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅಣ್ಣ ಅನಿಲ ಮಾದರ ಮೊದಲು ಕಾಲುವೆಯಲ್ಲಿ ನೀರು ಕುಡಿಯಲು ಹೋಗಿದ್ದಾನೆ. ಕಾಲು ಜಾರಿ ಕಾಲುವೆಯೊಳಗೆ ಹೋಗುತ್ತಿದ್ದಂತೆ ತಮ್ಮ ಸುನೀಲ್ ರಕ್ಷಿಸಲು ಹೋಗಿದ್ದಾನೆ.
ಅಣ್ಣ ಅನೀಲ್ ಮಾದರ (25), ಸುನೀಲ್ ಮಾದರ (25) ಕಾಲುವೆ ನೀರುಪಾಲಾದ ದುರ್ದೈವಿಗಳು. ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.