ಉ.ಕ ಸುದ್ದಿಜಾಲ ಬೆಳಗಾವಿ :

ನೆಲ, ಜಲ ವಿಷಯದಲ್ಲಿ ಬೆಳಗಾವಿ ರಾಜಕಾರಣಿಗಳು ನಾವೆಲ್ಲರೂ ಒಂದೇ. ಎಂಇಎಸ್ ಪುಂಡಾಟಿಕೆಯನ್ನು ಬಿಡಬೇಕು ನಾವು ಯಾರು ಇಲ್ಲಿ ಬಳಿ ಹಾಕಿಲ್ಲ, ಎಲ್ಲರೂ ಗಂಡಸರಿದ್ದಿವಿ ಎಂದು  ಲಅಥಣಿಯಲ್ಲಿ ಲಕ್ಷ್ಮಣ್ ಸವದಿ ಎಂಇಎಸ್ ಕಾರ್ಯಕರ್ತರಿಗೆ ಎಚ್ಚರಿಕೆ ರವಾನೆ ಮಾಡಿದ್ದಾರೆ.

ಗಡಿ ಕ್ಯಾತೆ ಹಾಗೂ ಬಸ್ಸುಗಳಿಗೆ ಮಸಿ ಬಳಿಯುತ್ತಿರುವ ಕೆಲವು ಪುಂಡರಿಗೆ ಎಚ್ಚರಿಕೆ. ಮಹಾರಾಷ್ಟ್ರ – ಕರ್ನಾಟಕ ಗಡಿ ವಿವಾದ ಈ ರೀತಿ ಗಡಿ ಕ್ಯಾತೆ ತೆಗೆಯುವುದರಿಂದ ಗಡಿ ಭಾಗದ ಜನರಿಗೆ ಅನಾನಕೂಲ, ವ್ಯಾಪಾರ ವಹಿವಾಟಿಗೂ ತೊಂದರೆ ಅನೇಕ ಆಸ್ಪತ್ರೆಗೆ ಹೋಗುವಂತವರಿಗೆ ತೊಂದರೆ

ಕರ್ನಾಟಕದಲ್ಲಿ ಬೆಳೆದಿರುವ ದವಸ ಧಾನ್ಯಗಳನ್ನ ಮಹಾರಾಷ್ಟ್ರದ ಮಾರಕಟ್ಟೆಗೆ ಒಯ್ಯದಿದ್ದರೆ ಮಹಾರಾಷ್ಟ್ರದವರಿಗೆ ಹಾನಿ ರೈತರ ವ್ಯಾಪಾರ ವಹಿವಾಟು ಎರಡು ರಾಜ್ಯದವರಿಗೆ ತೊಂದರೆ ಮಹಾರಾಷ್ಟ್ರ ಸರ್ಕಾರ ಮುತುರ್ವಜಿ ವಹಿಸಿ ಅಲ್ಲಿರುವ ಮುಖಂಡರನ್ನ ಹದ್ದ ಬಸ್ತಿನಲ್ಲಿ ಇಟ್ಟುಕೊಳ್ಳಬೇಕು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ

ಹೆಣವನ್ನು ಜಿವಂತ ಮಾಡಲು, ಮಹಾರಾಷ್ಟ್ರ ಹಾಗೂ ಕೆಲವರು ಬೆಳಗಾವಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಎಂಇಎಸ್ ಎಂಬುದು ಬೆಳಗಾವಿಯಲ್ಲಿ ಸತ್ತು ಹೋಗಿದೆ. ಅಲ್ಲಿನ ಸಿಎಂ ಅವರನ್ನು ಹಿಡಿತದಲ್ಲಿ ಇಟ್ಟುಕೊಂಡು ಉಭಯ ರಾಜ್ಯದಲ್ಲಿ ಸಮನ್ವಯ ಸಾಧಿಸಬೇಕು. ಇಲ್ಲವಾದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಪ್ರತಿಕ್ರಿಯೆ.