ಉ.ಕ ಸುದ್ದಿಜಾಲ ಬೆಳಗಾವಿ :

ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ. ಬೆಳಗಾವಿ ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ ಮುನಿ ಮಹಾರಾಜರ ಸಮಾಧಿ ಮರಣ ಹೊಂದಿದ್ದಾರೆ.

ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು ವಿಧಿವಶ

ನವೆಂಬರ 13 ರಂದು ಯಮಸಲ್ಲೇಖ ವೃತ ಸ್ವೀಕರಿಸಿದ್ದ ಜ್ಞಾನೇಶ್ವರ ಮುನಿ ಮಹಾರಾಜರು ಎಂಟು ದಿನಗಳ ಬಳಿಕ ನಿನ್ನೆ ಸಂಜೆ 5 ಸಮಾಧಿ ಮರಣ ಹೊಂದಿದ ಜ್ಞಾನೇಶ್ವರ ಮುನಿ ಮಹಾರಾಜರು ದೇವಲಾಪುರದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕರಾಗಿದ್ದ ಜ್ಞಾನೇಶ್ವರ ಮುನಿ ಮಹಾರಾಜರು.

ಇಂದು ಬೆಳಗ್ಗೆ 11 ರಿಂದ ಮುನಿಗಳ ಅಂತಿಮ ದಹನ ಕ್ರಿಯಾದಿ ವಿಧಿವಿಧಾನಗಳ ಬಳಿಕ ಸಾಯಂಕಾಲ ಸಹಸ್ರಾರು ಭಕ್ತಗಣದ ಸಮ್ಮುಖದಲ್ಲಿ ದೇವಲಾಪುರ ಕ್ಷೇತ್ರದಲ್ಲಿ ಮುನಿಗಳ ಅಂತ್ಯಕ್ರಿಯೆ ನಡೆದಿದೆ.

ದೇವಲಾಪುರದಲ್ಲಿ ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ 300 ಕ್ಕೂ ಅಧಿಕ ಮಕ್ಕಳಿಗೆ ಲೌಕೀಕ ಶಿಕ್ಷಣ ಜೊತೆಗೆ ಧಾರ್ಮಿಕ, ಮೌಲ್ಯ ಶಿಕ್ಷಣ ನೀಡ್ತಿದ್ದ ಮುನಿಗಳು ಕುಲಭೂಷನ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮೀಣ ಜನತೆಗೆ ಅನುಕೂಲ ಮಾಡಿದ್ದರು.

ಧಾರವಾಡ, ಬೆಳಗಾವಿಯಲ್ಲಿ ನೂರಕ್ಕೂ ಅಧಿಕ ಜಿನಮಂದಿರ ಕಟ್ಟಿಸಿರುವ ಮುನಿಗಳು ಧಾರವಾಡ ತಾಲೂಕಿನ ಗರಗ ಗ್ರಾಮದ ಬಡ ಕುಟುಂಬದಲ್ಲಿ 12 ಜುಲೈ 1941ರಲ್ಲಿ ಜನಿಸಿದ್ದ ಮುನಿಗಳು.

ಸ್ವಸಾಧನೆ ಮೂಲಕ ತಹಶಿಲ್ದಾರ್ ಹುದ್ದೇಗೇರಿ ಜನಸೇವೆ ಮಾಡಿರುವ ಜ್ಞಾನೇಶ್ವರ ಮುನಿಗಳು ನಿವೃತ್ತಿ ನಂತರ ಮುನಿ ಧಿಕ್ಷೆ ಪಡೆದು ಲೋಕಕಲ್ಯಾಣಕ್ಕಾಗಿ ಜೀವನ ಸಮರ್ಪಿಸಿಕೊಂಡಿದ್ದ ಮುನಿಗಳು.

2000ರಲ್ಲಿ ಬಾಹುಬಲಿ ಮುನಿಮಹಾರಾಜರಿಂದ ಬ್ರಹ್ಮಚರ್ಯ ಧಿಕ್ಷೆ 9 ನವೆಂಬರ್ 2011 ರಲ್ಲಿ ದಿಗಂಬರ ಮುನಿ ಧಿಕ್ಷೆ ಪಡೆದಿದ್ದ ಜ್ಞಾನೇಶ್ವರ ಮಹಾರಾಜರು. ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಮುನಿಗಳ ಮರಣ ಮಹೋತ್ಸವ ಕಾರ್ಯ.