ಉ.ಕ ಸುದ್ದಿಜಾಲ ವಿಜಯಪೂರ :
ಕಾವೇರಿ ಹೋರಾಟ ವಿಚಾರ ಹೋರಾಟಗಾರರಿಗೆ ರೋಲ್ ಕಾಲ್ ಹೋರಾಟಗಾರರು. ಹೋರಾಟಗಾರರ ಬಗ್ಗೆ ಅವಹೇಳನವಾಗಿ ಮಾತಾಡಿದ ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ.
ವಿಜಯಪುರದಲ್ಲಿ ನಿನ್ನೆ ರಾತ್ರಿ ನಡೆದಿದ್ದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಯತ್ನಾಳ ಸನಾತನ ಧರ್ಮದ ಬಗ್ಗೆ ಅವಹೇಳನ, ಸ್ವಾತಂತ್ರ್ಯ ಹೋರಾಟಗಾರರು, ದೇಶದ ಭಕ್ತರ ಅಪಮಾನ ಮಾಡ್ತಾರೆ. ಆವಾಗ ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾದ್ಯಂತ ದನಿ ಎತ್ತುತ್ತೆ. ನಮ್ಮ ಸ್ವಾಮಿ ವಿವೇಕಾನಂದ ಸೇನೆ ರೋಲ್ ಕಾಲ್ ಸಂಘಟನೆ ಅಲ್ಲ.
ಬೆಂಗಳೂರಿನಲ್ಲಿ ಕೆಲವು ಮಂದಿ ದಂಧಾ ಏನಂದ್ರೆ ಅಂಜಿಸಿ ರೊಕ್ಕ ತಗೊಳ್ಳೋದು. ಹೋರಾಟ ಮಾಡೋದು ಇಪ್ಪತ್ತು ಮಂದಿ ಇಲ್ಲ. ಹೋರಾಟದಲ್ಲಿ ಇಪ್ಪತ್ತು ಮಂದಿ ಇರಲ್ಲ. ಧಿಕ್ಕಾರ ಧಿಕ್ಕಾರ ಅಂತಿರ್ತಾರೆ..
ಪಾಪ ಪೇಪರ್ ನವರು, ಟಿವಿಯವರು ಹೋಗಿ ಜೀವಂತ ಇರಲಿ ಅಂತ ತೀವ್ರ ಪ್ರತಿಭಟನೆ, ಉಗ್ರ ಹೋರಾಟ. ಇರೋದೇ ಹದಿನೈದು ಮಂದಿ ಇರ್ತಾರೆ.
ಕಾವೇರಿಯಲ್ಲಿ ಕಾವೇರಿದ ವಾತಾವರಣ. ಎಷ್ಟು ಮಂದಿ ಇದ್ದಾರೆ 12ಮಂದಿ ಇದ್ದಾರೆ. ಈಗಿನಿಂದಲೇ ಹೋಗಿ ಕಾವೇರಿ ಗೇಟ್ ಮುಚ್ಚುತ್ತೇವೆ ಅಂತ ಭಾಷಣ ಮಾಡ್ತಾರೆ. ಹೋಗಿ ಏನು ಮುಚ್ಚುವುದಿದೆ ಸುಡುಗಾಡು, ಸುಮ್ಮನೆ ಹೊಡೆಯೋದು.
ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದವರಿಗೆ ಬೆಂಬಲ ಕೊಡಿ ಅಂತೀರಿ. ಉತ್ತರ ಕರ್ನಾಟಕದ ಕೃಷ್ಣಾ ಹೋರಾಟ ಬಂದಾಗ ಯಾಕೆ ಮಲಗಿಕೊಳ್ತಿರಿ. ನಾವು ನಿಮಗೆ ಸಪೋರ್ಟ್ ಮಾಡ್ತೀವಿ,ನೀವು ನಮಗೆ ಸಪೋರ್ಟ್ ಮಾಡಿ.
ಕಾವೇರಿ, ಕೃಷ್ಣಾ ಕರ್ನಾಟಕದ ಎರಡು ಕಣ್ಣು. ಎಲ್ಲರೂ ಸೇರಿ ಹೋರಾಟ ಮಾಡೋಣ. ಕಾವೇರಿ ಹೋರಾಟ ವಿಚಾರದಲ್ಲಿ ಪ್ರತ್ಯೇಕ ಎರಡು ಬಂದ್ ಗೆ ಯತ್ನಾಳ್ ವಿರೋಧ ಎಂದರು.