ಉ.ಕ‌ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ,  ಅಮಾಯಕ ಹೆಣ್ಣು ಮಕ್ಕಳಿರುವ ಮನೆಗಳಿಗೆ ಬಂದು, ನಿಮ್ಮ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಚ್ಛ ಮಾಡಿಕೊಡುವುದು

ಲೀಟ್ ಮಾಡಿಕೊಡುವುದಾಗಿ ನಂಬಿಸಿ, ಅವರ  ಗಮನವನ್ನು ಬೇರೆ ಕಡೆ ಸೆಳೆದು, ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಗುಂಪೊಂದು ಇತ್ತೀಚಿನ ದಿನಗಳಲ್ಲಿ ಸಂಚಾರಿಸುತ್ತಿದ್ದು, ಆದ್ದರಿಂದ ಯಾವುದೇ ಕಾರಣಕ್ಕೂ ಅಪರಚಿತರ ಕೈಯಲ್ಲಿ ತಮ್ಮ ಬಂಗಾರದ ಮತ್ತು ಬೆಳ್ಳಿ ಆಭರಣಗಳನ್ನು  ಕೊಡಬೇಡಿ ಎಂದು ಕಾಗವಾಡ ಪೋಲಿಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕಾಗವಾಡ ಪೋಲಿಸ್  ಠಾಣೆಯಿಂದ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ,

1) ಕೀಲಿ ಹಾಕಿದ ಮನೆಯಲ್ಲಿ ಯಾವುದೇ ಕಾರಣಕ್ಕೂ ಬೆಲೆಬಾಳುವ ವಸ್ತುಗಳು ಬಂಗಾರದ ಆಭರಣಗಳು ಮತ್ತು ನಗದು ಹಣ ಇಡಬಾರದು.

2) ಅಪರಿಚಿತರಿಗೆ ಯಾವುದೇ ಕಾರಣಕ್ಕೂ ತಮ್ಮ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆವರಣಗಳು ಕೊಡಕೂಡದು.

3) ತಮ್ಮ ಗ್ರಾಮದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ  ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವುದು ಮತ್ತು 112 ಗೇ ಫೋನ್ ಮಾಡಿ ತಿಳಿಸುವುದು.

4) ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವುದು ಮತ್ತು ಲಾಕ್ ಮಾಡುವುದು.

5) ಟ್ರ್ಯಾಕ್ಟರ್ ಕಾರು ಮತ್ತು ಇತರೆ ವಾಹನಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಜಿಪಿಎಸ್ ಅಳವಡಿಸುವುದು.

6) ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಮತ್ತು ಓಟಿಪಿಗಳನ್ನು ಮತ್ತು ಇತರೆ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳಿಗೆ ಹೇಳಕೂಡದು.

7) ಮಂದಿರ ಮಸೀದಿ ಚರ್ಚ್ ಇತರೆ ಸ್ಥಳಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬಾರದು ಒಂದು ವೇಳೆ ಬೆಲೆಬಾಳು ವಸ್ತುಗಳು ಇದ್ದರೆ ಕಮಿಟಿಯ ಸದಸ್ಯರು ರಾತ್ರಿ ಅಲ್ಲಿಯೇ ಮಲಗಬೇಕು.

8) ಹೋಟೆಲ್ ದಾಬ ಬಾರ್ ಅಂಡ್ ರೆಸ್ಟೋರೆಂಟ್ ಬ್ಯಾಂಕ್ ಮತ್ತು ಎಟಿಎಂ ಮತ್ತು ಇತರೆ ಸಂಘಗಳಿಗೆ CCTV ಹಾಕಬೇಕು.

9) ರೈತರು ತಮ್ಮ ಹೊಲಗದ್ದೆಯಲ್ಲಿ ಕುಡಿಸಿರುವ ಮೋಟಾರ್ ಮತ್ತು ಕೇಬಲ್ ವಯರ್ ಬಗ್ಗೆ ಜಾಗೃತರಾಗಿರಬೇಕು. ಮತ್ತು ನದಿ ನೀರಾವರಿ ಸ್ಕಿಮ್ ಗಳಲ್ಲಿ ಅಳವಡಿಸಿದ  ನೆರೆತ್ತುವ ಮೋಟಾರ್ ಮೇಲೆ ವಿದ್ಯುತ್ ಬೆಳಕನ್ನು ಹಾಕಿಸುವುದು, ದಿನನಿತ್ಯ ಒಬ್ಬರು ಕಾವಲುಗಾರನಂತೆ ಕಾವಲು ಕಾಯುವುದು.