ಉ.ಕ ಸುದ್ದಿಜಾಲ ಬೆಳಗಾವಿ :

ಮಹಾರಾಷ್ಟ್ರ ಸರ್ಕಾರ ಬೆದರಿಕೆ ವಿಚಾರ ಮಹಾರಾಷ್ಟ್ರಕ್ಕೆ ಕರ್ನಾಟಕ ಸರ್ಕಾರದ ಇಬ್ಬರು ಸಚಿವರ ಕಳಿಸಲು ಆಗ್ರಹ, ಕರ್ನಾಟಕ ಸೇರಲು ನಿರ್ಧಾರ ಮಾಡಿರುವ ಕನ್ನಡಿಗರಿಗೆ ಮಹಾರಾಷ್ಟ್ರದ ಕೆಲವು ಹಳ್ಳಿಗಳು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಗೆ ಆಗ್ರಹ.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ‌ ಒತ್ತಾಯ, ಅಶೋಕ್ ಚಂದರಗಿ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಲಾಯಿತು. ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಕನ್ನಡಿಗರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿ, ಬೆಳಗಾವಿ ಡಿಸಿ ಮುಖೇನ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು.

ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರ ಸೇರಿ ಕನ್ನಡ ಪ್ರದೇಶಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲಾಯಿತು. ಇದಕ್ಕಾಗಿ ರಾಜ್ಯದ ಇಬ್ಬರು ಹಿರಿಯ ಸಚಿವರು, ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ಕಳಿಸಲು ಆಗ್ರಹ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಜತ್ತ ಹಾಗೂ ಕನ್ನಡ ಭಾಷಿಕ ಪ್ರದೇಶಗಳು ಕರ್ನಾಟಕ ಸೇರಬೇಕು ಎಂದು ನೀಡಿದ ನಿಮ್ಮ ಹೇಳಿಕೆ ಮಹಾರಾಷ್ಟ್ರದ ಕನ್ನಡಿಗರಲ್ಲಿ ಹೊಸ ಆಸೆ ಮೂಡಿಸಿದೆ. ಅಲ್ಲಿಯ ಗ್ರಾಮ ಪಂಚಾಯತಿಗಳು ಕರ್ನಾಟಕ ಸೇರಲು ನಿರ್ಣಯ ಅಂಗಿಕರಿಸುತ್ತೇವೆ.

ಇದರಿಂದ ಮಹಾರಾಷ್ಟ್ರ ಸರ್ಕಾರ ಅಲ್ಲಿಯ ಕನ್ನಡಿಗರಿಗೆ ಕಿರುಕುಳ ನೀಡಲಾರಂಭಿಸಿದೆ. ಮಹಾರಾಷ್ಟ್ರದ ಕನ್ನಡಿಗರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಲ್ಲಬೇಕಾದ ಕರ್ನಾಟಕ ಸರ್ಕಾರ ಮೌನ ವಹಿಸಿದ್ದು ಖಂಡನೀಯ.

ಅಶೋಕ್ ಚಂದರಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ.

ಕನ್ನಡ ಪ್ರದೇಶದಲ್ಲಿರುವ ಪ್ರಮುಖರ ಬೆದರಿಸುವ ತಂತ್ರದಲ್ಲಿ ಮಹಾರಾಷ್ಟ್ರ ಸರ್ಕಾರ ತೊಡಗಿದೆ. ನೇಣಿಗೇರಿಸಿದರೂ ತಮ್ಮ ನಿಲುವು ಬಿಡಲ್ಲ ಎಂದು ಮಹಾರಾಷ್ಟ್ರದ ಕನ್ನಡಿಗರು ತಿಳಿಸಿದ್ದಾರೆ. ಅವರನ್ನು ನಡುನೀರಿನಲ್ಲಿ ಬಿಡುವ ಕೆಲಸ ಕರ್ನಾಟಕ ಸರ್ಕಾರದಿಂದ ಆಗಬಾರದು.

ಹೀಗಾಗಿ ಇಬ್ಬರು ಹಿರಿಯ ಸಚಿವರು, ಗಡಿಸಂರಕ್ಷಣಾ ಆಯೋಗದ ಅಧ್ಯಕ್ಷರನ್ನು ಮಹಾರಾಷ್ಟ್ರಕ್ಕೆ ಕಳಿಸಿ. ಮಹರಾಷ್ಟ್ರ ಕನ್ನಡಿಗರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿ. ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಒತ್ತಾಯ.