ಉ.ಕ‌ ಸುದ್ದಿಜಾಲ ಅಥಣಿ :

ನನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಿದೆ. ನಾನು ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಅಭಿಪ್ರಾಯ ನನಗೆ ಮುಖ್ಯ. ಮಾಡು ಇಲ್ಲವೇ ಮಡಿ ಎಂಬತ್ತಾಗಿದೆ. ಮಾರ್ಚ 27 ಕ್ಕೆ ನಾನು ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಸಭೆಯಲ್ಲಿ ಸವದಿ ಮಾತನಾಡಿದ್ದಾರೆ. ನಾನು ನಾಲ್ಕು ದಿನದಲ್ಲಿ ಎಲ್ಲಾ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಟಿಕೆಟ್ ಕೇಳು ಅಂದ್ರೆ ನಾನು ಬಿ ಫಾರಂ ಕೇಳುತ್ತೇನೆ.  ಪಕ್ಷದ ವರಿಷ್ಠರು ಬೇಡಾ ಅಂದ್ರೆ ನಾನು ಅವರ ಮಾರ್ಗದರ್ಶನದಲ್ಲಿ ಇರುತ್ತೇನೆ.

ಎಲ್ಲಾ ಸಮುದಾಯದ ಒಪ್ಪಿಗೆ ಪಡೆದುಕೊಂಡರು ಪಕ್ಷಕ್ಕೆ ತಿಳಿಸುತ್ತೇನೆ. ನಾಲ್ಕು ಆರು ದಿನದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಪಕ್ಷ ನನ್ನನ್ನು ನೂರಕ್ಕೆ ನೂರರಷ್ಟು ಪಕ್ಷ ನನ್ನ ಕೈ ಬಿಡುವುದಿಲ್ಲ ಎಂದು ವಿಶ್ವಾಸವಿದೆ ಎಂದು ಹೇಳಿದ್ದಾರೆ.