ಉ.ಕ ಸುದ್ದಿಜಾಲ ಕಾಗವಾಡ :

ಕಾಗವಾಡ ಮತಕ್ಷೇತ್ರವನ್ನ ನಂದನವನ‌ ಮಾಡಲು ಹೊರಟ್ಟಿದ್ದಾರೆ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಕೆಲ ದಿನಗಳ ಹಿಂದಷ್ಟೆ ಮಂಗಸೂಳಿ ಗ್ರಾಮಕ್ಕೆ ಹೋಸದಾಗಿ‌ ಪಾಲಟೆಕ್ನಿಕ ಕಾಲೇಜು ತರುವುದರ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಈಗ ಮತ್ತೆ ಕಾಗವಾಡ ಮತಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂರು ಇಲ್ಲದವರಿಗೆ  1700 ಹೆಚ್ಚುವರಿ ಮನೆಗಳನ್ನು ಒದಗಿಸಿದ್ದಾರೆ. ಕಾಗವಾಡ ಮತ ಕ್ಷೇತ್ರದ ಬಿಜೆಪಿ ಶಾಸಕರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರ ಅತ್ಯಂತ ವಿಶೇಷ ಪ್ರಯತ್ನದಿಂದ ಕರ್ನಾಟಕ ಘನ ಸರ್ಕಾರದ ವಸತಿ ಇಲಾಖೆ ವತಿಯಿಂದ ಕಾಗವಾಡ ಮತಕ್ಷೇತ್ರದ ಗ್ರಾಮ ಪಂಚಾಯಿತಿಗಳಿಗೆ 1700 ಹೆಚ್ಚುವರಿ ಮನೆಗಳನ್ನು ಮಂಜುರಾತಿ ಮಾಡಿದ್ದಾರೆ.

ಕಾಗವಾಡ ಮತಕ್ಷೇತ್ರದ ಆಯಾ ಪಂಚಾಯತಿಗಳಿಗೆ ಮನೆಗಳ ಲಿಸ್ಟ ನೀಡಲಾಗಿದ್ದು ಆಯಾ ಪಂಚಾಯತಿಗಳ ಅನುಸಾರವಾಗಿ ಮನೆಗಳನ್ನ ಹಂಚಿಕೆ ಮಾಡಲಾಗುವುದು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.

ಕಾಗವಾಡ ಮತಕ್ಷೇತ್ರದಲ್ಲಿ ಮನೆಗಳು ಮಂಜೂರಾದ ಬಗ್ಗೆ ಪತ್ರ