ಉ.ಕ ಸುದ್ದಿಜಾಲ ಅಥಣಿ :
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೂತುಹಲ ಕೆರಳಿಸಿದ ರಮೇಶ್ ಜಾರಕಿಹೋಳಿ ಅಥಣಿ ಭೇಟಿ, ಆರ್ ಎಸ್ ಎಸ್ ಉತ್ತರ ಪ್ರಾಂತ ಮುಖಂಡ ಅರವಿಂದ ದೇಶಪಾಂಡೆ ಮನೆಯಲ್ಲಿ ಗೌಪ್ಯ ಸಭೆ ನಡೆಸುವ ಮೂಲಕ ರೆಬೆಲ್ ಶಾಸಕ ರಮೇಶ್ ಜಾರಕಿಹೋಳಿ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಡಿ ಸಿ ಎಮ್ ಲಕ್ಷ್ಮಣ ಸವದಿ ಅವರು ವಿವಿಧ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸುತ್ತಿರುವ ಬೆನ್ನಲ್ಲೆ ಅಥಣಿಗೆ ಭೇಟಿ ನೀಡಿದ ರಮೇಶ್ ಜಾರಕಿಹೋಳಿ. ಲಕ್ಷ್ಮಣ ಸವದಿ ಅವರು ಬಿಜೆಪಿಯ ಜಿಲ್ಲಾ ಮುಖಂಡರಿಂದ ಸ್ವಾಭಿಮಾನ ಧಕ್ಕೆ ಹೇಳಿಕೆ ಬೆನ್ನಲ್ಲೆ ಭೇಟಿ ನೀಡಿದ್ದು, ಅಥಣಿ ಬಿಜೆಪಿ ಮತಕ್ಷೇತ್ರದಲ್ಲಿ ಭಿನ್ನಮತ ಶಮನಕ್ಕೆ ಆರ್ ಎಸ್ ಎಸ್ ಮುಖಂಡರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯಸಭೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ ಅಥಣಿಗೆ ಇಂದಿನ ಭೇಟಿಯ ಮೂಲ ಉದ್ದೇಶ 28 ಕ್ಕೆ ಕೊಟ್ಟಲಗಿ ಅಮ್ಮಾಜೆಶ್ವರಿ ಏತ ನೀರಾವರಿ ಉದ್ಘಾಟನೆಗೆ ಸಿ ಎಮ್ ಆಗಮನ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೆನೆ. ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆ ಅವರೊಂದಿಗೆ ನಮ್ಮ ಹಳೆಯ ಸಂಭಂದವಿದೆ. ಇದೊಂದು ಸೌಜನ್ಯದ ಭೇಟಿಯಾಗಿದೆ.
ಮಾಜಿ ಡಿಸಿಎಂ ವಿವಿಧ ಸಮುದಾಯಗಳ ಮುಖಂಡರ ಸಭೆ ಕುರಿತು ಮಾತನಾಡಿದ ಅವರು, ಲಕ್ಷ್ಮಣ ಸವದಿಯಂತ ಪ್ರಜ್ಞಾವಂತ ಮತ್ತು ಬುದ್ದಿವಂತ ಅಭ್ಯರ್ಥಿ ಹೀಗೆಕೆ ಮಾಡುತ್ತಿದ್ದಾರೆ ಅನ್ನುವದು ತಿಳಿಯುತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ನಾವು ಮುಂದುವರೆಯುತ್ತಿದ್ದೇವೆ. ಮಾಧ್ಯಮದವರು ಇದನ್ನು ಟ್ವಿಸ್ಟ ಮಾಡಬೇಡಿ.
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಮಹೇಶ್ ಕುಮಠಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೆನೆ. ಮಾಜಿ ಡಿಸಿಎಮ್ ಸವದಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರೆ ಅವರು ಯೋಚನೆ ಮಾಡಬೇಕು. ಪಕ್ಷದ ವರಿಷ್ಠರು ಮತ್ತು ಹೈ ಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾರೆ ಎಂದರು.
ನಾನು ಟಿಕೆಟ್ ಕೇಳುತ್ತೇನೆ ಎಂದು ಸವದಿ ಹೇಳಿಕೆ ವಿಚಾರವಾಗಿಮಾತನಾಡಿದ ರಮೇಶ ಜಾರಕಿಹೋಳಿ ಯಾಕೆ ಆ ರೀತಿ ಹೇಳಿದ್ದಾರೆ ಅವರನ್ನು ನೀವು ಕೇಳಬೇಕು. ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕನಿಂದ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತಗೋತ್ತೇನೆ.
ಇದೆ 28 ಕ್ಕೆ ಸಿಎಂ ಅಥಣಿಗೆ ಬರುತ್ತಾರೆ. ವಿವಿಧ ಕಾಮಗಾರಿಗೆ ಚಾಲನೆ ನೀಡಲು ಆಗಮಿಸುತಿದ್ದಾರೆ. ಲಕ್ಷ್ಮಣ್ ಸವದಿ ಸ್ವತಂತ್ರ ಅಭ್ಯರ್ಥಿ ಸ್ಪರ್ದೆ ಮಾಡಿದರೆ ಅವರಿಗೆ ಬಿಟ್ಟಿದ್ದು. ನಾವು ಪಕ್ಷದ ಪರವಾಗಿ ಪರವಾಗಿ ಬಿಟ್ಟಿದ್ದು. ಅಮಿತ್ ಶಾ ಜೊತೆ ಬೇಟಿ ಕೆಲವು ವಿಚಾರಗಳು ಮಾತನಾಡಲಾಗಿದೆ. ಅಮಿತ್ ಶಾ ಅವರನ್ನು ಕೇಳಿ ನಾವು ಪಕ್ಷಕ್ಕೆ ಬಂದಿದ್ದು. ಆ ಭೇಟಿ ಆಗುವುದೇ ವಿಶೇಷ ಅರ್ಥ ಕಲ್ಪಿಸುವ ಬೇಡ ಎಂದರು.