ಉ‌.ಕ ಸುದ್ದಿಜಾಲ ಬೆಳಗಾವಿ :

ಕರ್ನಾಟಕ ಜೈನ ಸಮಾಜದ ಹಕ್ಕುಗಳ ಹೋರಾಟಕ್ಕೆ ಭಟ್ಟಾರಕ ಮುನಿ‌ಮಹರಾಜರ ಕರೆ ನೀಡಿದ್ದು ಜೈನ ಸಮಾಜದ ಮುನಿವರ್ಯರು, ಭಟ್ಟಾರಕ ಮಹಾರಾಜರು, ಸಮಾಜದ ರಾಜಕೀಯ ನಾಯಕರು, ಮುಖಂಡರು, ಜೈನ ಸಮಾಜದ ಹೋರಾಟಗಾರರು, ಎಲ್ಲ ಸಂಘ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು, ಮಂದಿರ ಕಮಿಟಿಗಳು ಶ್ರಾವಕ, ಶ್ರಾವಕಿಯರು, ಯುವಕ ಯುವತಿಯರ ಎಲ್ಲರ ಕೂಗು ಒಂದೇ ಜೈನ ಸಮಾಜದ ಹಕ್ಕುಗಳನ್ನು ಸರ್ಕಾರದಿಂದ ಪಡೆದೆ ತೀರುವುದು.

ಡಿಸೆಂಬರ 9 ಕ್ಕೆ ಬೆಳಗಾವಿಯಲ್ಲಿ ಜೈನ ಸಮಾವೇಶ – ಸಮಾವೇಶದ ಬಗ್ಗೆ ಭಟ್ಟಾರಕ ಮುನಿಗಳು ಹೇಳೊದೇನು ಇಲ್ಲಿದೆ ನೋಡಿ…..

ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ

ನಾನು ಎನ್ನದೆ ನಾವು ಎನ್ನೋಣ. ಸದೃಢ ಸಮಾಜ ನಿರ್ಮಾಣ ಮಾಡೋಣ, ಜೈನ ಧರ್ಮದ ಅಸ್ತಿತ್ವಕ್ಕಾಗಿ, ಜೈನ ಸಮಾಜದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಒಗ್ಗೂಡಿನ ಎಂದು ಭಟ್ಟಾರಕ ಮುನಿ ಮಹರಾಜರು ಕರೆ ನೀಡಿದ್ದಾರೆ.