ಉ.ಕ ಸುದ್ದಿಜಾಲ ಬೆಳಗಾವಿ :
ಪ್ರಸ್ತುತ ಅಂತಿಮ ವರ್ಷದ ಪದವಿ/ಡಿಪ್ಲೋಮಾ/ಸ್ನಾತಕೋತ್ತರ/ವೃತಿಪರ ಕೋರ್ಸ/ಸಂಜೆ ಕಾಲೇಜು/ಕಾನೂನು ವಿದ್ಯಾರ್ಥಿಗಳ ಪರೀಕ್ಷಾ ಬಾಕಿ ಇರುವುದನ್ನು ವಿದ್ಯಾರ್ಥಿಗಳಿಗೆ ಈಗಾಗಲೇ 2021-22 ನೇ ಸಾಲಿನ ಬಸ್ ಪಾಸಗಳ 2 ತಿಂಗಳ ಅವಧಿ ವಿಸ್ತರಿಸಿದ ರಸೀದಿ ಹಾಗೂ ಚಾಲ್ತಿ ಪಾಸುಗಳ ಮಾನ್ಯತಾ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ.
ಮುಂದುವರೆದು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಸೆಮಿಸ್ಟರ್ / ತರಗತಿಗಳ ಎಲ್ಲಾ ವಿದ್ಯಾರ್ಥಿಗಳ ಪಾಸ್ ಅವಧಿಯು ಸೆಪ್ಟೆಂಬರ್ 31 ರಂದು ಮುಕ್ತಾಯವಾಗುತ್ತಿದ್ದು ಅವಧಿ ಮುಕ್ತಾಯವಾದ ನಂತರದಲ್ಲಿ ಈ ಹಳೆಯ ಪಾಸಗಳನ್ನು ಮಾನ್ಯ ಮಾಡಲು ಅವಕಾಶವಿಲ್ಲದೆ ಇರುವುದರಿಂದ ಬಾಕಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಈ ಕೂಡಲೇ ಸೇವಾಸಿಂಧು ಆನ್‌ಲೈನ್ ಮುಖಾಂತರ ಪಾಸ್ ಅರ್ಜಿ ಸಲ್ಲಿಸಿ.
ಸಂಸ್ಥೆಯ ನಿಗಧಿತ ಪಾಸ್ ಕೌಂಟರಗಳಲ್ಲಿ ಹೊಸ ಪಾಸ್ ಪಡೆದು ಯಾವುದೇ ಅಡಚಣೆಯಿಲ್ಲದೆ ಪ್ರಯಾಣವನ್ನು ಮುಂದುವರೆಸಬಹುದಾಗಿದೆ ಎಂದು ಅಂತಿಮವಾಗಿ ಸೂಚನೆ ನೀಡಲಾಗಿದೆ. ವಿಭಾಗೀಯ ನಿಯಂತ್ರಣಾಧಿಕಾರಿ ವಾ.ಕ.ರ.ಸಾ.ಸಂಸ್ಥೆ, ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಯಲ್ಲಮ್ಮ ಜಾತ್ರೆ : ವಿಶೇಷ ಬಸ್ ವ್ಯವಸ್ಥೆ
ಶ್ರೀ ಯಲ್ಲಮ್ಮಾದೇವಿ (ದಸರಾ) – 2022ಜಾತ್ರೆಯು ಸೆ.25 ರಿಂದ ಅ.5 ರ ವರೆಗೆ ಜರುಗಲಿದ್ದು, ಜಾತ್ರೆಯ ಮುಖ್ಯ ದಿನಗಳು ಸೆ.27, ಅ.30, ಅ.1 ಹಾಗೂ ಅ.2 ರಂದು ಇರುತ್ತವೆ. ಈ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ವಾಹನಗಳನ್ನು ಬೆಳಗಾವಿ ಕೇಂದ್ರ/ನಗರ ಬಸ್ ನಿಲ್ದಾಣ ಹಾಗೂ ಯಲ್ಲಮ್ಮಾಗುಡ್ಡದಿಂದ ಬೆಳಗಾವಿಗೆ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಾಕರಸಾಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.