ಉ.ಕ ಸುದ್ದಿಜಾಲ ಚಿಕ್ಕಮಗಳೂರು :

ಮೆದುಳು ನಿಷ್ಕ್ರಿಯಗೊಂಡ ಬಳಿಕ 9 ಅಂಗಾಂಗಳನ್ನ ದಾನ ಮಾಡಿದ್ದ ರಕ್ಷಿತಾ ಕುಟುಂಬಸ್ಥರು, ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ಪರಿಹಾರ ನೀಡಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ರಕ್ಷಿತಾ ಕಳೆದ 5 ದಿನದ ಹಿಂದೆ ಬಸ್ ಹತ್ತುವಾಗ ಬಿದ್ದು ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ್ದಾಳೆ. ರಕ್ಷಿತಾ, ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಯುವತಿಗೆ ಸರ್ಕಾರದ ವತಿಯಿಂದ 8 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಣೆ, ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ಪರಿಹಾರ, ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಮಂಜೂರು ಹೀಗೆ ಒಟ್ಟು ಎಂಟು ಲಕ್ಷ ಪರಿಹಾರ ನೀಡಿದ ರಾಜ್ಯ ಸರ್ಕಾರ

ತಾಂಡಾ ಅಭಿವೃದ್ಧಿ ನಿಗಮ ಹಾಗೂ ಉದ್ಯಮಶೀಲತೆ ಯೋಜನೆಯಡಿಯ ಚೆಕ್ ನೀಡಲಿರುವ ಕುಡುಚಿ ಶಾಸಕ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಸೋಮನಹಳ್ಳಿ ತಾಂಡ್ಯಾಗೆ ಬಂದು ಚೆಕ್ ನೀಡಲಿದ್ದಾರೆ.