ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ-ಅಂಕಲಿ ರಸ್ತೆ ಮಧ್ಯೆ ಕಾರ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಮಹಾರಾಷ್ಟ್ರ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.

ಮಹಾರಾಷ್ಟ್ರ ದ ಸಾಂಗ್ಲಿ ನಗರದ ಕೋಳಿ ಕುಟುಂಬದವರು ಕರ್ನಾಟಕದ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಮದ್ಯ ಮಾರ್ಗದಲ್ಲಿ ಸಂಭವಿಸಿದೆ. ಅಪಘಾತದಲ್ಲಿ ತುಕಾರಾಮ ಕೋಳಿ (72) ರುಕ್ಮಿಣಿ ಕೋಳಿ(62) ಕಲ್ಪಿನಾ ಅಜಿತ ಕೋಳಿ(32) ಮೃತ ದುರ್ದೈವಿಗಳಗಿದ್ದಾರೆ.

ಆದಿತ್ಯ ಕೋಳಿ (11)ಅನೋಜ್ ಕೋಳಿ (13) ಕಾರ್ ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೂವರನ್ನ ಚಿಕ್ಕೋಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಭಂದ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.