ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆ ಹದ್ದಿಯ  ಗ್ರಾಮಗಳ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ, ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಧ್ಯಪ್ರದೇಶ ರಾಜ್ಯದ ಕಳ್ಳತನ ಮಾಡುವ ಗ್ಯಾಂಗ್ ಪ್ರವೇಶಿಸಿದ್ದಾರೆ.

ಗೋಕಾಕ್ ಸೇರಿದಂತೆ ಹಲವು ಕಡೆಗಳಲ್ಲಿ  ಕಳ್ಳತನ ಮಾಡಿದ ಬಗ್ಗೆ ವರದಿಯಾಗಿದ್ದು, ಸಾರ್ವಜನಿಕರಿಗೆ ಜಾಗೃತವಾಗಿರಲು ಸೂಚಿಸಲಾಗಿದೆ. ಸದರಿ, ಗ್ಯಾಂಗ್ ಕಳ್ಳತನ ಮಾಡುವ ವಿಧಾನಗಳು

1.ಬೀಗ ಹಾಕಿರುವ ಮನೆಗಳನ್ನು ಗುರುತಿಸುವುದು
2.ಕಳ್ಳತನ ಮಾಡಿವ ಸ್ಥಳಗಳಲ್ಲಿ ಹಿಡಿಗಾತ್ರ ಕಲ್ಲುಗಳನ್ನು ಇಡುವುದು (ಕಾರಣ ಯಾರಾದರೂ ಬಂದರೆ ಎಸೆಯಲು)
3.ಹೆಚ್ಚಾಗಿ ಸರಣಿ ಮನೆಗಳತನ ಮಾಡುವುದು (Apartment building, govt or private Head quarters)

4.ಕಳ್ಳತನ ಮಾಡುವ ಸಮಯ ಮದ್ಯೆ ರಾತ್ರಿ 1 ಗಂಟೆಯಿಂದ 4 ಗಂಟೆ.
5.ಮೊದಲೂ 1 ಗಂಟೆಯವರೆಗೆ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಸಿನೆಮಾ ಟಾಕಿಜ ಲೆಔಟಗಳಲ್ಲಿರುವುದು.
6.ಕೈಯಲ್ಲಿ ಚೂಪಾದ ಆಯುಧಗಳನ್ನು, ರಾಡ್ ಗಳನ್ನು ಉಪಯೋಗಿಸುತ್ತಾರೆ.

ಸಾರ್ವಜನಿಕರಿಗೆ ಜಾಗೃತವಾಗಿರಲು ಕಾಗವಾಡ ಪೋಲಿಸರು ರಾತ್ರಿ ಹೊತ್ತು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಕಟಣೆ ತಿಳಿಸಿದ್ದಾರೆ.