ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ ನಗರದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮೂಡನಂಬಿಕೆಯನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಸತ್ಯಶೋಧನೆಗಾಗಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ಉಪಯೋಗಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಡಾ.ಎಂ ಟಿ ಕುರಣಿ ಅವರು ಹೇಳಿದರು.

ಚಿಕ್ಕೋಡಿ ಪಟ್ಟಣದ ಕೆಎಲ್ಇ. ಸಂಸ್ಥೆಯ ಬಿ.ಕೆ.ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ “ವಿಜ್ಞಾನಂ” ವಸ್ತು ಪ್ರದರ್ಶನ ಕಾರ್ಯಕ್ರಮ ಪ್ರೌಢಾ ಶಾಲಾ ಮಟ್ಟದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಪ್ರೌಢ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕುರಿತು ವಿಶೇಷ ಸಂಶೋಧನೆಗೆ ಅಧ್ಯಯನ ಮಾಡಲು ಆಸಕ್ತಿಯನ್ನು ಬೆಳಸಿಕೊಳ್ಳುವುದು ಅವಶ್ಯಕವಾಗಿದೆ.

ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಕೌಶಲ್ಯವನ್ನು ಬೆಳಸಿಕೊಳ್ಳಬೇಕು. ವಿಜ್ಞಾನ ಸತ್ಯ ಶೋಧನೆ ಪ್ರತಿರೂಪ ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈಯಲು ವಿಫುಲವಾದ ಅವಕಾಶಗಳಿದ್ದು ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ಕೌಶಲ್ಯಗಳನ್ನು ಬೆಳಸಿಕೊಂಡು ಸಮಾಜಕ್ಕೆ ಮತ್ತು ಜಗತ್ತಿನ ಮನುಕೂಲಕ್ಕೆ ತಮ್ಮ ಅಮೂಲ್ಯ ಸಮಯ ಮಿಸಲಿಡಬೇಕೆಂದು  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಪದವಿಪೂರ್ವ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪ್ರಕಾಶ ಕೋಳಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ತತ್ವಗಳು ವಿಜ್ಞಾನದ ಅವಿಷ್ಕಾರಗಳು ಕುರಿತು ಹೆಚ್ಚಿನ ಜ್ಞಾನ ತಿಳುವಳಿಕೆ ಬೆಳಸಿಕೊಳ್ಳುವುದು ಪ್ರಸ್ತುತ ಅಗತ್ಯ ಮತ್ತು ಅನಿವಾರ್ಯವಾಗಿದೆ.

ಮೂಲ ವಿಜ್ಞಾನದ ಪ್ರಮುಖ ವಿಜ್ಞಾನಿಗಳಾದ ಕಣಾದ, ಐನಸ್ಟೀನ್, ಡಾಲ್ಟನ್ ಮುಂತಾದ ವಿಜ್ಞಾನಿಗಳು ಸಮಾಜಕ್ಕೆ ವಿನೂತನ ಆವಿಸ್ಕಾರಗಳ ಮೂಲಕ ಸಮಾಜಕ್ಕೆ ಕೊಡಿಗೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಯ ಅವಕಾಶಗಳನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ವ್ಹಿ.ಟಿ.ಯು. ವಿಶ್ವವಿದ್ಯಾಲಯದ ‘ಜ್ಞಾನ ರಥ’ ಬಸ್ ವಿದ್ಯಾರ್ಥಿಗಳನ್ನು ಆಕರ್ಷಿಕ ಮಾಹಿತಿಗಳೊಂದಿಗೆ ಮನರಂಜಿಸಿತು.

ಬಿ.ಕೆ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಯು.ಆರ್. ರಾಜಪೂತ, ಡಾ. ಎಸ್. ಎಂ. ಪಾನಬುಡೆ, ಡಾ. ಬಿ. ಎಂ. ಪಾಟೀಲ, ಪ್ರೊ. ಪಿ. ಬಿ. ಪಾಟೀಲ, ವಿಶಾಲ ಕೋಲೆ, ಎಂ.ಎಸ್. ಜರಳಿ, ರಾಹುಲ ಮುರದುಂಡೆ, ಡಿ.ಆರ್.ಪಾಟೀಲ, ಇತರ ವಿಭಾಗದ ವಿದ್ಯಾರ್ಥಿಗಳು ಉಪನ್ಯಾಸಕರು ಉಪಸ್ಥಿತರಿದ್ದರು. ವಿವಿಧ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನ ಪ್ರಾತಕ್ಷಿಕೆಗಳನ್ನು ನೀಡಿದರು. ಸುಪ್ರೇಮ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ಎಂ. ಎಂ. ಪಾಟೀಲ, ಪ್ರೊ. ಪ್ರಿಯಾ ಕೊಂಬಾರೆ ನಿರೂಪಿಸಿದರು. ಪ್ರೊ. ಮಹೇಶ ಮದಬಾವಿ ಸ್ವಾಗತಿಸಿದರು.  ಪ್ರೊ. ತಿಪ್ಪಣ್ಣ ಖೋತ ವಂದಿಸಿದರು.