ಉ.ಕ ಸುದ್ದಿಜಾಲ‌ ಹುಬ್ಬಳ್ಳಿ :

ಬಜೆಟ್  ಬಗ್ಗೆ ಇಲಾಖೆಗಳ ಚರ್ಚೆ ಪ್ರಾರಂಭವಾಗುತ್ತಿದೆ. ಪ್ರತಿ ಇಲಾಖೆಯ ನಂತರ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಲಾಗುವುದುದೆಂದು ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾಡಿನ ಜನತೆಗೆ ಸಿದ್ದಪ್ಪಜ್ಜನ ಆಶೀರ್ವಾದ ಸಿದ್ದಪ್ಪಜ್ಜ ಹುಬ್ಬಳ್ಳಿಯ ಆರಾಧ್ಯ ದೇವರು, ಪವಾಡ ಪುರುಷರು. ಬಾಲ್ಯದಿಂದಲೂ ಸಿದ್ದಪ್ಪಜ್ಜನ ಮಠಕ್ಕೆ ಬರುತ್ತಿದ್ದು, ಆಶೀರ್ವಾದ ಪಡೆಯುತ್ತಿದ್ದೆವು.

ಸಂಕ್ರಮಣದ ಮೊದಲ ದಿನ ಸಿದ್ದಪ್ಪಜ್ಜ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇನೆ. ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ. ಸಿದ್ದಪ್ಪಜ್ಜ ನಾಡಿನ ಜನತೆಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.