ಉ.ಕ ಸುದ್ದಿಜಾಲ ಧಾರವಾಡ :

ಕೃಷಿ ಜಮೀನಿನ ಮೇಲೆ ಮಾಡಿದ ಸಾಲ ತೀರಿಸಲಾಗದೇ ಮನನೊಂದು ತಂದೆ ಮಗ ಇಬ್ಬರೂ ರೈತರು ಮರಕ್ಕೆ ನೇಣಿ ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಗೋಳ ಪಟ್ಟಣದಲ್ಲಿ ಕಳೆದ ಗುರುವಾರದಂದು ನಡೆದಿದೆ.

ಕುಂದಗೋಳ ಪಟ್ಟಣದ ನಿವಾಸಿಗಳಾದ ಶಿವನಗೌಡ ನಿಂಗಪ್ಪ ಹೂಲಿಕಟ್ಟಿ (60) ಹಾಗೂ ಅನಿಲ್ ಶಿವನಗೌಡ ಹೂಲಿಕಟ್ಟಿ (30) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಮೃತರು ಇಬ್ಬರು ರೈತರು ಕಳೆದ ಮೂರ್ನಾಲ್ಕು ವರ್ಷಗಳಿಂದ ತಂದೆ ಶಿವನಗೌಡ ಹಾಗೂ ಮಗ ಅನಿಲ್ ಹೆಸರಿನಲ್ಲಿರುವ ಜಮೀನಿನ ಮೇಲೆ ಕೃಷಿ ಚಟುವಟಿಕೆ ಕೈಗೊಳ್ಳಲು ಖಾಸಗಿ ಬ್ಯಾಂಕ್, ಸಹಕಾರಿ ಸಂಘ ಸೇರಿ ಒಟ್ಟು 9 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದರೆಂದ ಹೇಳಲಾಗುತ್ತಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ, ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಗುರುವಾರದಂದು ಕುಂದಗೋಳ ಪಟ್ಟಣದ ಹೊರ ವಲಯದ ಜಮೀನಿನಲ್ಲಿ ತಂದೆ ಮಗ ಇಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.