ಉ.ಕ ಸುದ್ದಿಜಾಲ ಬೆಳಗಾವಿ :

ಫೆಬ್ರುವರಿ 7, 2023 ರಿಂದ 17 ರವರೆಗೆ ಚಿಂಚಲಿ ಶ್ರೀ ಮಾಯಕ್ಕಾ ದೇವಿ ಜಾತ್ರೆಯುಅತ್ಯಂತ ವಿಜೃಂಭಣೆಯಿಂದ ಜರಗುತ್ತದೆ, ಉತ್ತರ ಕರ್ನಾಟಕದ ಶಕ್ತಿ ದೇವತೆಯಾ್ ಚಿಂಚಲಿ‌ ಮಾಯಕ್ಕ ದೇವರ ದರ್ಶನ ಪಡೆಯಲು ಬರುವವರಿಗೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲಾಗಿದೆ.

ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ರಾಯಬಾಗ, ಅಥಣಿ, ಕುಡಚಿ, ಮಿರಜ ಹಾಗೂ ಮುಂತಾದ ಸ್ಥಳಗಳಿಂದ ಪ್ರಯಾಣಿಸುವ ಚಿಕ್ಕೋಡಿ ವಿಭಾಗದ ರಾಯಬಾಗ, ಚಿಕ್ಕೋಡಿ, ಗೋಕಾಕ, ಅಥಣಿ, ಘಟಕಗಳಿಂದ ವಿಶೇಷ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು.

ರಾಯಬಾಗ ಬಸ್ ನಿಲ್ದಾಣ ಮತ್ತು ಮಿರಜ ಶ್ರೀ ಮಾಯಕ್ಕಾ ದೇವಿ ಚಿಂಚಲಿ ಜಾತ್ರಾ ಕೇಂದ್ರಗಳಲ್ಲಿ ಪ್ರತ್ಯೇಕ ಜಾತ್ರಾ ನಿಯಂತ್ರಣ ಬಿನಿಯಂತ್ರಣ ಬಿಂದುವಿನಲ್ಲಿ ಹಾಗೂ ಬಸ್ ಕೇಂದ್ರಗಳಲ್ಲಿ ನುರಿತ ಸಾರಿಗೆ ನಿಯಂತ್ರಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಸುವ್ಯವಸ್ಥಿತ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು.

ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕು ಎಂದು ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.