ಉ.ಕ ಸುದ್ದಿಜಾಲ ರಾಯಬಾಗ :

ಪೊಲೀಸ್ ಠಾಣೆಯ ಮುಂದೆ ಶವವಿಟ್ಟು ಪ್ರತಿಭಟನೆ ಪ್ರಕರಣ. ತಂದೆಯ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಕ್ಕೆ ಟ್ವಿಸ್ಟ್. ಪೊಲೀಸರ ಕಿರುಕುಳಕ್ಕೆ ಅಣ್ಣಪ್ಪ ಸದಲಗಿ ಸಾವನ್ನಪ್ಪಿಲ್ಲ. ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಗುಳೇದ ಸ್ಪಷ್ಟನೆ.

ಪೊಲೀಸರ ಕಿರುಕುಳಕ್ಕೆ ಅಣ್ಣಪ್ಪ ಸದಲಗಿ ಸಾವನ್ನಪ್ಪಿಲ್ಲ : ಬೆಳಗಾವಿ ಎಸ್ಪಿ

ಸಿಸಿ ಟಿವಿ ಪರಿಶೀಲನೆ ನಡೆಸಿಲಾಗಿದೆ. ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಜನವರಿ 10 ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಈಗಾಗಲೇ ಮೃತ ಅಣ್ಣಪ್ಪನಿಗೆ ಹೃದಯ ಸಮಸ್ಯೆ ಇತ್ತು. 2017ರಲ್ಲಿ ಶಸ್ತ್ರಚಿಕಿತ್ಸೆ ಆಗಿತ್ತು.

9 ದಿನಗಳ ಹಿಂದೆ ಕೆಎಲ್ಇ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆ ಇರುವದರಿಂದ ಚಿಕಿತ್ಸೆ ಪಡೆದಿದ್ರೂ. ಅಲ್ಲಿ ವೆಂಟಿಲೇಟರನಲ್ಲಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.


ಈಗ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಹೇಳಿಕೆ ನೀಡಿದ್ದಾರೆ.