ಉ.ಕ ಸುದ್ದಿಜಾಲ ಚಿಕ್ಕೋಡಿ :
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದು ಹೋದ ಚರ್ಚೆ, ದೆಹಲಿ ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ ಮುಂದುವರೆಸುವು ಅವಶ್ಯಕತೆ ಇಲ್ಲಾ ಎಂದು ಸಚಿವ ಸತೀಶ ಜಾರಕಿಹೋಳಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸತೀಶ್ ಜಾರಕಿಹೋಳಿ ಹೇಳಿಕೆ ಯಾರ ಏನೆ ಹೇಳಿದ್ರು ಮುಗಿದುಹೋದ ಅಧ್ಯಾಯ. ಹೈಕಮಾಂಡ, ಪಕ್ಷ ತೀರ್ಮಾನ ಮಾಡುವ ವಿಷಯ ಇದು ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲಾ. ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದ್ರೆ ಮಹತ್ವ ಇಲ್ಲಾ ಪಕ್ಷದ ವೇದಿಕೆಯಲ್ಲೆ ಚರ್ಚೆ ಆಗಬೇಕು
ಡಿಸಿಎಮ್ ಗಳ ಹೆಚ್ಚಳ ಮಾಡುವ ವಿಚಾರ ಚುನಾವಣೆಗು ಮುಂಚೆ ಕೂಗು ಇತ್ತು ಅದನ್ನ ಮಾಡಬೇಕಾ ಬೇಡವಾ ಎನ್ನುವ ವಿಚಾರ ವರಿಷ್ಠರಿಗೆ ಬಿಟ್ಟ ವಿಚಾರ ಸದ್ಯ ಅದು ಸಹ ಮುಗಿದುಹೋದ ವಿಚಾರ
ದಲಿತರು ಮುಖ್ಯಮಂತ್ರಿ ಆಗುವ ವಿಚಾರ ಇದನ್ನ ನನ್ನ ಬಳಿ ಕೇಳಬೇಡಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನೆ ಕೇಳಿ ನಮ್ಮ ಹೊಸ ಕೆಲಸ ಅಭಿವೃದ್ಧಿ ಬಗ್ಗೆ ಕೇಳಿ ಅಷ್ಟಕ್ಕೇ ಮಾತ್ರ ಸೀಮಿತ ನಾನು
ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ ದ್ವನಿ ಕೂಡ ಎತ್ತಿದ್ದೇನೆ ಅವಕಾಶ ಬಂದೆ ಬರುತ್ತೆ ಎಂಬುದು ನಂಬಿಕೆ ಇದೆ ಕಾದು ನೋಡಬೇಕು ಸರ್ಕಾರದ ಮೇಲೆ ಒತ್ತಡ ಹಾಕಿದಿವಿ ಕಾದು ನೋಡೊನ ಎಂದರು.