ಉ.ಕ ಸುದ್ದಿಜಾಲ ಧಾರವಾಡ :
ಗರ್ವದಿಂದ ಹೇಳುತ್ತೇನೆ ನಾನೊಬ್ಬ ಹಿಂದೂ ನಾನೊಬ್ಬನೆ ಅಲ್ಲಾ ದೇಶದಲ್ಲಿ ಕೋಟ್ಯಾಂತರ ಜನರಿಗೆ ಹಿಂದೂ ಎಂದು ಹೇಳಲು ಹೆಮ್ಮೆಯಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತ್ತಾಲಿಲ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸತ್ ನಲ್ಲಿ ರಾಹುಲ್ ಗಾಂಧಿ ಹಿಂದೂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪುರಾತನ ಸಾವಿರಾರು ವರ್ಷಗಳ ಇತಿಹಾಸವಿರುವ ಭೂಮಿಗೆ ನಾನು ಇಲ್ಲಿ ಹುಟ್ಟಿದ್ದೇನೆ ಎಂದು ಹೇಳಲು ಹೆಮ್ಮೆ ಇದೆ. ನಾನು ಹಿಂಸಕ ಅಲ್ಲಾ ನಾನು ಸುಳ್ಳು ಹೇಳಲ್ಲಾ.
ರಾಹುಲ್ ಗಾಂಧಿ ಹೇಳಿಕೆಯನ್ನು ವಿರೋಧಿಸುತ್ತೇನೆ, ಖಂಡಿಸುತ್ತೇನೆ. ಈ ರೀತಿಯ ಹೇಳಿಕೆ ಮೂಲಕ ನೂರು ಕೋಟಿ ಹಿಂದೂಗಳಿಗೆ ಅವಮಾನ ಮಾಡಿದ್ದೀರಿ ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಭೋಧಿಸಿಲ್ಲಾ, ಭೋಧಿಸುವುದಿಲ್ಲಾ ಹಿಂದೂ ಅಂದರೆ ಸರ್ವೆ ಜನ ಸುಖಿನೋ ಭವಂತು.
ಎಲ್ಲರೂ ಸುಖವಾಗಿರಲಿ ಎಂದು ಹೇಳುವ ಏಕೈಕ ಧರ್ಮ ಹಿಂದೂ ಧರ್ಮ ಹಿಂದೂಗಳು, ಸಹಿಷ್ಣುತೆ ಸಮಾನತೆ ಭೋಧಿಸುತ್ತಾರೆ ಹಿಂದೂ ಅತ್ಯಂತ ಶ್ರೇಷ್ಠವಾದ ವಿಚಾರವನ್ನು ಜಗತ್ತಿಗೆ ಪ್ರಸಾರ ಮಾಡ್ತಾರೆ ಎಂದು ಹಿಂಸಕರಲ್ಲಾ ಎಂದು ಸುಳ್ಳು ಹೇಳುವರಲ್ಲಾ
ರಾಜಕಾರಣ ಸಾವಿರ ಮಾತಾಡಿ ಆದ್ರೆ ಹಿಂದೂ ಧರ್ಮ, ದೇವತೆಗಳ ಬಗ್ಗೆ ಈ ರೀತಿ ಅಪಮಾನ ಮಾಡುವುದು ಈ ದೇಶದ ಹಿಂದೂಗಳ ಸಹನೆ ಮಾಡುವುದಿಲ್ಲಾ. ದೇಶದಲ್ಲಿ ಯಾರು ದಾಳಿಕೋರರು ಎಂಬುದನ್ನು ನೆನಪಿಟ್ಟುಕೊಳ್ಳಿ ಮೊಗಲರು, ಮುಸ್ಲಿಮರು, ಪೋರ್ಚುಗೀಸರು ಈ ದೇಶದ ಮೇಲೆ ದಾಳಿ ಮಾಡಿದರು.
ಹಿಂಸೆಯನ್ನು ಭೋಧಿಸುವವರು ಯಾರು ಎಂಬುದನ್ನು ಯೋಚನೆ ಮಾಡಿ ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕು, ಅದರ ಬಗ್ಗೆ ಅನುಭವ ಪಡೆಯಬೇಕು ಎಂದರು.