ಉ.ಕ ಸುದ್ದಿಜಾಲ ಕಾಗವಾಡ :
ಸುಮಾರು ನಾಲ್ಕು ಮನೆ ದರೋಡೆ ಮಾಡಿ ಮರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ನಡೆದಿದೆ.
ಶೇಡಬಾಳ ರೈಲು ನಿಲ್ದಾಣದ ಹೊರವಲಯದ ಯಮನಪ್ಪ ಸಬಕಾಳ ಮನೆ ಸೇರಿದಂತೆ ಸುತ್ತಮುತ್ತಲಿನ ನಾಲ್ಕು ಮನೆಗಳನ್ನ ಖದಿಮರು ಕಳ್ಳತನ ಮಾಡಿದ್ದಾರೆ.
ಖದಿಮರಿಗೆ ಕಳ್ಳತನಕ್ಕೆ ಅಡ್ಡಿ ಮಾಡಿದ ಯಮನಪ್ಪ ಹಾಗೂ ಪತ್ನಿ ಸಾವಕ್ಕ ಇಬ್ಬರಿಗೂ ಹೊಡೆದಿದಗದಾರೆ ಯಮನಪ್ಪನಿಗೆ ಹೊಟ್ಟೆ ಭಾಗಕ್ಕೆ ಹಾಗೂ ಕಾಲಿಗೆ ಚಾಕು ಇರಿದು ಪತ್ನಿಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಗಾಯಾಳುಗಳನ್ನ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಘಟನಾ ಸ್ಥಳಕ್ಕೆ ಕಾಗವಾಡ ಪೊಲೀಸ್ ರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.