ಕಲಬುರಗಿ :

ಮಸೀದಿಗಳ ಮೇಲೆ ಮೈಕ್ ನಿಷೇಧ ಮಾಡಿ ಎಂದು ಹೇಳು ಹಲವು ದಿನಗಳು ಕಳೆದಿವೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಇದುವರೆಗೆ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಮಸೀದಿಗಳ ಮೇಲೆ ಮೈಕ್ ಶಬ್ದ ಶುರುವಾಗುತ್ತದೆ, ಇದು ಕಂಟೆಮ್ಟ್ ಆಫ್ ಕೋರ್ಟ್ ಆಗುತ್ತದೆ. ದಿನದ ಐದು ಬಾರಿ ಮಸೀದಗಳಲ್ಲಿನ ಪ್ರಾರ್ಥನೆ ಶಬ್ದ ಕಿರಿಕಿರಿಯುಂಟಾಗುತ್ತಿದೆ. ನಮಗೆ ಪ್ರಾರ್ಥನೆ ಮಾಡಲು ಅಭ್ಯಂತರವಿಲ್ಲ, ಆದರೆ ಶಬ್ದಕ್ಕೆ ತಕರಾರು ಇದೆ. ಡಿಸಿ ಕ್ರಮ ಕೈಗೊಳ್ಳದಿದ್ದರೆ ನಾವೇ ಮಸೀದಿಗಳ ಮೇಲಿನ ಮೈಕ್ ಕಿತ್ತು ಬಿಸಾಕ್ತಿವಿ. ಅನೇಕ‌ ಮುಸ್ಲಿಂ ದೇಶಗಳಲ್ಲೆ ಮಸೀದಿಗಳ ಮೈಕ್ ತೆಗೆಯಲಾಗಿದೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಪ್ರಮೋದ ಮುತಾಲಿಕ